newsics.com
ನವದೆಹಲಿ: ಅಪಘಾತವಾದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಸಿದರೆ ನಗದು ಬಹುಮಾನ ನೀಡಿ ಗೌರವಿಸಲು ಸರ್ಕಾರ ಮುಂದಾಗಿದೆ.
ಅಪಘಾತವಾದ ಒಂದು ಗಂಟೆಯ ಒಳಗೆ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರೆ ಅಂಥಹ ವ್ಯಕ್ತಿಗೆ 5000 ರೂ. ಬಹುಮಾನ ಸಿಗಲಿದೆ.
ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ ಐದು ಬಾರಿ ಈ ರೀತಿ ನಗದು ಬಹುಮಾನ ನೀಡಲಾಗುವುದು. ಅಕ್ಟೋಬರ್ 15ರಿಂದ ಈ ಯೋಜನೆ ಜಾರಿಗೆ ಬರಲಿದೆ.