Wednesday, October 5, 2022

ಬಾಸ್ಮತಿ ಅಕ್ಕಿ ಸಂಸ್ಕರಣಾ ಘಟಕ ‘ಬೆಸ್ಟ್ ಫುಡ್ಸ್’ ಮೇಲೆ ಸಿಬಿಐ ದಾಳಿ

Follow Us

newsics.com
ನವದೆಹಲಿ: ಪ್ರೀಮಿಯಂ ಬಾಸ್ಮತಿ ಅಕ್ಕಿಯ ಅತಿ ದೊಡ್ಡ ಸಂಸ್ಕರಣಾ ಘಟಕ ‘ಬೆಸ್ಟ್ ಫುಡ್ಸ್’ ಲಿಮಿಟೆಡ್ ಮೇಲೆ ಮಂಗಳವಾರ (ನ.10) ಸಿಬಿಐ ದಾಳಿ ನಡೆಸಿದೆ.
ಬೆಸ್ಟ್ ಫುಡ್ಸ್ ಲಿಮಿಟೆಡ್ ನ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮೇಲೆ ಸಾವಿರ ಕೋಟಿಗೂ ಹೆಚ್ಚಿನ ಬ್ಯಾಂಕ್ ವಂಚನೆಯ ಆರೋಪ ಇದ್ದು, ಅವರ ಮನೆಗಳ ಮೇಲೂ ಸಿಬಿಐ ದಾಳಿ ನಡೆದಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ನೇತೃತ್ವದ ಬ್ಯಾಂಕ್ ಒಕ್ಕೂಟವು ಈ ಸಾಲ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಢ ಹಾಗೂ ದೆಹಲಿಯಲ್ಲಿನ ಕಂಪನಿ ಕಚೇರಿಗಳು, ಅಧ್ಯಕ್ಷ ಮೊಹಿಂದರ್ ಪಾಲ್ ಜಿಂದಾಲ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್ ಗುಪ್ತಾ ಅವರ ಕರ್ನಲ್’ನಲ್ಲಿನ ಮನೆಗಳಲ್ಲಿ ಶೋಧ ನಡೆಯಿತು.
ವಂಚನೆ, ಕ್ರಿಮಿನಲ್ ದುರುಪಯೋಗ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ದುರ್ನಡತೆ, ಫೋರ್ಜರಿ ಹೀಗೆ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಬೆಸ್ಟ್ ಫುಡ್ಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ. ಕಂಪನಿಯಿಂದ ಸಾಲ ಹಿಂತಿರುಗಿಸದ ಕಾರಣಕ್ಕೆ ಸೆಪ್ಟೆಂಬರ್ 27, 2016ಕ್ಕೆ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಆಗಿದ್ದು, 1006.46 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ.

ಆರ್.ಆರ್.ನಗರ, ಶಿರಾದಲ್ಲಿ ಬಿಜೆಪಿ ಜಯಭೇರಿ; ಕನ್ನಡದಲ್ಲೇ ಮೋದಿ ಶುಭಹಾರೈಕೆ

ಕೊರೋನಾಗೆ ಪೆಲೆಸ್ತೀನ್‌ನ ರಾಜತಾಂತ್ರಿಕ ಸಾಯಿಬ್ ಬಲಿ

ಕಾಲುವೆಗೆ ಉರುಳಿದ ಕಾರು; ಮೂವರು ನೀರುಪಾಲು

ಕೊರೋನಾಗೆ ಲಸಿಕೆ ಸಿಗುವವರೆಗೂ ಕೊಡಗಲ್ಲಿ ಶಾಲೆ ಆರಂಭವಿಲ್ಲ

ದಾವೂದ್ ಇಬ್ರಾಹಿಂನ ಆರು ಆಸ್ತಿ ಹರಾಜು

ಮತ್ತಷ್ಟು ಸುದ್ದಿಗಳು

vertical

Latest News

ಪ್ರಪಾತಕ್ಕೆ ಉರುಳಿದ ಬಸ್: 25 ಮಂದಿ ಸಾವು, 23 ಪ್ರಯಾಣಿಕರಿಗೆ ಗಾಯ

newsics.com ಪೌರಿ (ಉತ್ತರಾಖಂಡ): ಬಸ್ಸೊಂದು 500 ಮೀಟರ್ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಪ್ರಯಾಣಿಕರು ಸಾವನ್ನಪ್ಪಿದ ಭೀಕರ ದುರಂತ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!