ದೆಹಲಿ: ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಮಾಜಿ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು.
ಭೂ ಸೇನಾ ಮುಖ್ಯಸ್ಥ ಹುದ್ದೆಯಿಂದ ಡಿ.31ರಂದು ನಿವೃತ್ತರಾಗಿದ್ದ ಅವರನ್ನು ಕೇಂದ್ರ ಸರ್ಕಾರ ದೇಶದ ಮೊದಲ ಸಿಡಿಎಸ್ ಆಗಿ ನೇಮಕ ಮಾಡಿದೆ.
ಸಿಡಿಎಸ್ ಹುದ್ದೆ ಸೃಷ್ಟಿಯಾದಾಗಿನಿಂದ ಅದಕ್ಕೆ ಬಿಪಿನ್ ರಾವತ್ ಹೆಸರೇ ಕೇಳಿಬರುತ್ತಿತ್ತು. ಬಿಪಿನ್ ರಾವತ್ ಅವರಿಗೆ ಸಿಡಿಎಸ್ ಹುದ್ದೆಗೆ ನಿಮ್ಮನ್ನು ನೇಮಕ ಮಾಡಿದ್ದೇವೆ ಎಂದು ಖುದ್ದಾಗಿ ನರೇಂದ್ರ ಮೋದಿಯವರು ಸಮಾರಂಭದಲ್ಲೇ ಹೇಳಿದರು.