ನವದೆಹಲಿ: ಕಳೆದ ಎಂಟು ತಿಂಗಳಲ್ಲಿ ಪಾಕಿಸ್ತಾನ 2,335 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ 2019ರ ಮೇ 30ರಿಂದ 2020ರ ಜನವರಿ 20ರವರೆಗೆ 2,335 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿಯೂ ಇಂಡೋ ಪಾಕ್ ನಡುವೆ ಗಡಿನಿಯಂತ್ರಣದ ಬಳಿ 117 ದಾಳಿ ನಡೆದಿರುವುದಾಗಿ ವರದಿ ವಿವರಿಸಿದೆ.
ಕದನ ವಿರಾಮ ಉಲ್ಲಂಘಿಸಿ ಪಾಕ್ ನಡೆಸಿದ ದಾಳಿಯಲ್ಲಿ ಎಂಟು ಭಾರತೀಯ ಯೋಧರು ಹುತಾತ್ಮರಾಗಿರುವುದಾಗಿ ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ರಾಜ್ಯ ಸಭೆಗೆ ತಿಳಿಸಿದ್ದಾರೆ.
8 ತಿಂಗಳಲ್ಲಿ ಪಾಕ್ ನಿಂದ 2,335 ಬಾರಿ ಕದನ ವಿರಾಮ ಉಲ್ಲಂಘನೆ
Follow Us