ಬೆಂಗಳೂರು: ಗಾನಗಂರ್ಧವ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂಗೀತ ಲೋಕದ ಜೊತೆಗೆ ದೇಶವೇ ಕಣ್ಣೀರು ಮಿಡಿದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು,ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಎಸ್‍ಪಿಬಿ ನಿಧನ ದಿಗ್ಬ್ರಮೆ ಮೂಡಿಸಿದೆ ಎಂದು ಉಪರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದರೇ, ಸಂಗೀತ ಲೋಕದ ದಿಗ್ಗಜ ಎ.ಆರ್.ರೆಹಮಾನ್ ಎಸ್‍ಪಿಬಿ ಜೊತೆಗಿನ ಪೋಟೋದ ಜೊತೆ ತಮ್ಮ ಸಂತಾಪ ಸೂಚಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಎಸ್‍ಪಿಬಿ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದು, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ,ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಗಾಯಕ ರಾಜೇಶ್ ಕೃಷ್ಣನ್ ಎಸ್‍ಪಿಬಿಯವರೊಂದಿಗಿನ ವೈಯಕ್ತಿಕ ಒಡನಾಟ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಗಾಯಕ ವಿಜಯ್ ಪ್ರಕಾಶ್, ನಟ ಜಗ್ಗೇಶ್, ನಟಿ ಸುಧಾರಾಣಿ, ದೊಡ್ಡಣ್ಣ ಹೀಗೆ ನೂರಾರು ನಟ-ನಟಿಯರು ಹಾಡು ನಿಲ್ಲಿಸಿದ ಗಾನ ಗಂಧರ್ವನಿಗೆ ತಮ್ಮ ಅಶ್ರುತರ್ಪಣ ಸಲ್ಲಿಸಿದ್ದಾರೆ.
ಎಸ್‍ಪಿಬಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು
Follow Us