ನವದೆಹಲಿ: ದೇಶೀ ತಳಿಯ ಹಸುಗಳ ಸಗಣಿ, ಹಾಲು, ಮೂತ್ರದಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ವ್ಯವಸ್ಥಿತ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಶುದ್ಧ ದೇಶೀ ತಳಿಯ ಹಸುಗಳ ಸಗಣಿ, ಹಾಲು ಮತ್ತು ಮೂತ್ರದಲ್ಲಿನ ಘಟಕಾಂಶಗಳನ್ನು ಗುರುತಿಸಿ ಅವುಗಳನ್ನು ವೈದ್ಯಕೀಯ ಉತ್ಪನ್ನ, ಕೃಷಿ ಉತ್ಪನ್ನ ಹಾಗೂ ಮನೆಬಳಕೆಯ ವಸ್ತುಗಳಲ್ಲಿ ಬಳಸುವ ಕುರಿತು ನಡೆಸುವ ಸಂಶೋಧನಾ ಕಾರ್ಯಕ್ಕೆ ಅನುದಾನ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅರ್ಜಿ ಆಹ್ವಾನಿಸಿದೆ.
ಶಿಕ್ಷಣ ಸಂಸ್ಥೆಗಳಿಂದ ಹಾಗೂ ಸರ್ಕಾರೇತರ ಸಂಘಟನೆಗಳಿಂದ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 14ರ ಮೊದಲು ಅರ್ಜಿ ಸಲ್ಲಿಸಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.
ದೇಸಿ ಹಸುಗಳ ಉತ್ಪನ್ನ ಸಂಶೋಧನೆಗೆ ಕೇಂದ್ರ ಕ್ರಮ
Follow Us