ನವದೆಹಲಿ: 2020- 21ನೇ ಸಾಲಿನ ಕೇಂದ್ರ ಮುಂಗಡ ಪತ್ರ ಮಂಡನೆ ಲೋಕಸಭೆಯಲ್ಲಿ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡ ಪತ್ರ ಮಂಡಿಸುತ್ತಿದ್ದಾರೆ. ಬಜೆಟ್ ಭಾಷಣದ ಆರಂಭದಲ್ಲಿ ಮುಂಗಡ ಪತ್ರದ ಸ್ವರೂಪದ ಕುರಿತು ಕೂಡ ಮಾತನಾಡಿದ ನಿರ್ಮಲಾ ಸೀತಾರಾಮನ್, ಇದು ಎಲ್ಲ ಭಾರತೀಯರ ಆಶೋತ್ತರಗಳನ್ನು ಈಡೇರಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಅರುಣ್ ಜೈಟ್ಲಿ ಅವರ ಕೊಡುಗೆಯನ್ನು ಸ್ಮರಿಸಿದ ನಿರ್ಮಲಾ ಸೀತಾರಾಮನ್. ಜಿ ಎಸ್ ಟಿ ಅನುಷ್ಟಾನದಲ್ಲಿ ಅರುಣ್ ಜೈಟ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.