Thursday, June 17, 2021

ವಾರದ ಎಲ್ಲ ದಿನ ಪಡಿತರ ಅಂಗಡಿ ತೆರೆಯಲು ಕೇಂದ್ರ ಸರ್ಕಾರ ಸೂಚನೆ

newsics.com

ನವದೆಹಲಿ: ಲಾಕ್’ಡೌನ್ ವೇಳೆ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ಸಿಗುತ್ತಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ವಾರದ ಎಲ್ಲ ದಿನವೂ ಪಡಿತರ ಅಂಗಡಿಗಳನ್ನು ತೆರೆಯುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ವಾರದ ಎಲ್ಲಾ ದಿನಗಳಲ್ಲೂ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು ಮತ್ತು ಹೆಚ್ಚು ಅವಧಿ ಅಂಗಡಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಕೇಂದ್ರ ಕ್ರಮ ಕೈಗೊಂಡಿದೆ. ಬಡವರಿಗೆ ಉಚಿತವಾಗಿ ಆಹಾರಧಾನ್ಯಗಳು ಸಕಾಲದಲ್ಲಿ ಮತ್ತು ಸುರಕ್ಷಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಪತ್ತೆ

newsics.com ಬೋಟ್ಸ್ವಾನ: ಜಗತ್ತಿನ‌ ಮೂರನೇ ಅತಿ ದೊಡ್ಡ ವಜ್ರ ಗ್ಯಾಬರೋನ್ ನಲ್ಲಿ ಪತ್ತೆಯಾಗಿದೆ. ಐದು ದಶಕಗಳಿಂದ ವಜ್ರದ ಗಣಿಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಡಿ ಬೀರ್ಸ್ ಕಂಪನಿಯ ವಿಭಾಗವಾದ...

ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ವಿಚಾರಣೆ

newsics.com ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಿಚಾರಣೆ ನ಼಼ಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಾಜಿ ಎನ್ ಕೌಂಟರ್...

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ ಟಿವಿ ಉತ್ಪನ್ನಗಳ ಬೆಲೆ ಹೆಚ್ಚಿಸಲು ಗಂಭೀರ...
- Advertisement -
error: Content is protected !!