ತಿರುವನಂತಪುರಂ: ವಿಮಾನ ದುರಂತ ನಡೆದ ಕೇರಳದ ಕರಿಪುರಂ ವಿಮಾನ ನಿಲ್ದಾಣಕ್ಕೆ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಯಿಂದ ಆಗಮಿಸಿರುವ ಮುರಳೀಧರನ್, ಕೇಂದ್ರ ಸರ್ಕಾರದ ಎಲ್ಲ ನೆರವನ್ನು ಖಾತರಿಪಡಿಸಲಿದ್ದಾರೆ.
ಈ ಮಧ್ಯೆ ದುರಂತ ಕುರಿತು ಉನ್ನತ ಮಟ್ಟದ ತನಿಖೆಗೆ ಕೂಡ ಆದೇಶ ನೀಡಲಾಗಿದ್ದು, ಮುಂಬೈ ಮತ್ತು ದೆಹಲಿಯಿಂದ ವಿಶೇಷ ವಿಮಾನಗಳಲ್ಲಿ ಅಧಿಕಾರಿಗಳು ಇಂದು ಕರಿಪುರಂ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಮೇಲ್ನೋಟಕ್ಕೆ ಭಾರೀ ಮಳೆಯಿಂದಾಗಿ ವಿಮಾನ ಸ್ಕಿಡ್ ಆದ್ದದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ವಿಮಾನದ ರನ್ ವೇ ಯಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಈ ಹಿಂದೆಯೇ ಪತ್ತೆ ಹಚ್ಚಲಾಗಿತ್ತು ಎಂಬ ಮಾಹಿತಿ ಕೂಡ ಹೊರಬಿದ್ದಿದೆ.