newsics.com
ನವದೆಹಲಿ: ಕೇಂದ್ರೀಯ ಪೊಲೀಸ್ ಕ್ಯಾಂಟೀನ್’ಗಳು ‘ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ’ ಎಂದು ಮರುನಾಮಕರಣಗೊಂಡಿದ್ದು, ಇನ್ಮುಂದೆ ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಿವೆ.
ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ್ದು, 119 ಮಾಸ್ಟರ್ ಭಂಡಾರ ಹಾಗೂ 1871 ಸಬ್ಸಿಡರಿ ಭಂಡಾರಗಳು ಕಾರ್ಯನಿರ್ವಹಿಸುತ್ತಿದ್ದು, ನಿವೃತ್ತ ಹಾಗೂ ಕರ್ತವ್ಯನಿರತ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸರಿಗೆ ಲಭ್ಯವಾಗಲಿದೆ ಎಂದರು.
10 ಮಿನಿ ಭಂಡಾರಗಳು ನಿವೃತ್ತ ಸಿಆರ್ಪಿಎಫ್ ಯೋಧರಿಗಾಗಿ ಬಳಕೆಯಾಗುತ್ತಿದ್ದು, ಈ ಪೈಕಿ 7 ಭಂಡಾರಗಳು ಮಾಸ್ಟರ್ ಭಂಡಾರದ ಮೇಲುಸ್ತುವಾರಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಇತರ ವಾಣಿಜ್ಯ ಉತ್ಪನ್ನಗಳನ್ನು ಬೆಂಬಲಿಸುವ ಬದಲಾಗಿ ಕೇವಲ ಸ್ವದೇಶಿ ವಸ್ತುಗಳನ್ನು ಮಾರಲು ನಿರ್ಧರಿಸಲಾಗಿದ್ದು, ಈ ಆದೇಶ ಜೂನ್ 1, 2020 ರಿಂದ ಜಾರಿಗೆ ಬಂದಿದೆ.
ಕೆಪೆಕೆಬಿಗೆ ಗುಣಮಟ್ಟದ ವಸ್ತುಗಳನ್ನು ನೇರವಾಗಿ ರೈತರು ಮತ್ತು ಮಾರಾಟಗಾರರಿಂದ ಖರೀದಿಸಿ ಒದಗಿಸಲಾಗುತ್ತಿದೆ. ಇವುಗಳ ಖರೀದಿ ನೋಂದಣಿಗೂ ಮುನ್ನ ಸರ್ಕಾರದ ನೀರಿಕ್ಷೆಯ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದ್ದು, ಸಿಬ್ಬಂದಿಗೆ ರಿಯಾಯತಿ ದರದಲ್ಲಿ ಸಿಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೆಪಿಕೆಬಿಯಲ್ಲಿ ಸಧ್ಯ ಮಾರಾಟವಾಗುವ ವಸ್ತುಗಳ ಮೇಲೆ ಜಿಎಸ್ಟಿ ವಿನಾಯತಿ ಅನ್ವಯವಾಗಿಲ್ಲ ಎಂದು ಸಚಿವ ರೈ ಹೇಳಿದ್ದಾರೆ.
ಮೆಡಿಕಲ್ ಪಿಜಿ ವಿದ್ಯಾರ್ಥಿಗಳಿಗೆ 3 ತಿಂಗಳು ಜಿಲ್ಲಾಸ್ಪತ್ರೆಯಲ್ಲಿ ಸೇವೆ ಕಡ್ಡಾಯ
ಕೊರೋನಾ ಕಾಟ; ಸೆ.23ರಂದು ಕರ್ನಾಟಕ ಸೇರಿ 7 ರಾಜ್ಯಗಳ ಸಿಎಂ ಜತೆ ಮೋದಿ ಸಭೆ
ಐಪಿಎಲ್; ಪಂಜಾಬ್ ಟೀಮ್’ಗೆ 158 ರನ್ ಗುರಿ ನೀಡಿದ ಡೆಲ್ಲಿ
ಕಟೀಲು ದೇಗುಲದ 17 ಮಂದಿಗೆ ಕೊರೋನಾ
ಕೃಷಿ ವಿಧೇಯಕ ವಿಚಾರದಲ್ಲಿ ವಿಪಕ್ಷಗಳಿಂದ ದಾರಿ ತಪ್ಪಿಸುವ ಯತ್ನ- ರಾಜನಾಥ್ ಸಿಂಗ್