NEWSICS.COM
ನವದೆಹಲಿ: ಕೊರೋನಾ ಸೋಂಕು ನಿರ್ವಹಣೆಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳು ಮತ್ತು ಅಲ್ಟ್ರಾವಯಲೆಟ್ ಕಿರಣಗಳನ್ನು ಬಳಸುವುದಕ್ಕೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ನ.5) ತಿಳಿಸಿದೆ.
ಇದರ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನ್ಯಾಯಪೀಠ ಸರ್ಕಾರಕ್ಕೆ ಹೇಳಿದೆ.
ಮನುಷ್ಯನ ಮೇಲೆಸೋಂಕು ನಿವಾರಕ ರಾಸಾಯನಿಕಗಳ ಸಿಂಪಡನೆ , ಹೊಗೆ ಹಾಕುವುದು, ಸೋಂಕು ನಿವಾರಕಗಳ ಜಾಹೀರಾತು ಮಾಡುವುದು, ಸೇರಿದಂತೆ ಅವುಗಳ ಉತ್ಪಾದನೆ ಮತ್ತು ಸ್ಥಾಪನೆ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.