newsics.com
ದುಬೈ: ಡೆಲ್ಲಿ ವಿರುದ್ಧ 4 ವಿಕೆಟ್ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದಂತಾಗಿದೆ. ಡೆಲ್ಲಿ ತಂಡ ನೀಡಿದ 173 ರನ್ಗಳ ಗುರಿ ಪಡೆದ ಚೆನ್ನೈ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಬ್ಯಾಟಿಂಗ್ ನೆರವಿನಿಂದ 19.4 ಓವರ್ಗಳಲ್ಲಿ 173 ರನ್ ಸಿಡಿಸಿ ಜಯ ದಾಖಲಿಸಿದೆ.
173 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ 1ರನ್ ಸಿಡಿಸಿ ಔಟಾದರು. ಬಳಿಕ ಉತ್ತಪ್ಪ ಮತ್ತು ಗಾಯಕ್ವಾಡ್ 2ನೇ ವಿಕೆಟ್ಗೆ 110 ರನ್ (77 ಎಸೆತ) ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ 63 ರನ್ (44 ಎಸೆತ, 7 ಬೌಂಡರಿ, 2 ಸಿಕ್ಸ್) ಬಾರಿಸಿದರು. ಧೋನಿ ಔಟಾಗದೇ 18 ರನ್(6 ಎಸೆತ, 3 ಬೌಂಡರಿ, 1 ಸಿಕ್ಸರ್), ಮೊಯಿನ್ ಆಲಿ 16 ರನ್(12 ಎಸೆತ, 2 ಬೌಂಡರಿ) ಹೊಡೆದು ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸಿದರು.
ಕ್ವಾಲಿಫೈಯರ್ ಪಂದ್ಯದ ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡ ಚೆನ್ನೈ ಲೆಕ್ಕಾಚಾರದಂತೆ ಆರಂಭದಲ್ಲಿ ಶಿಖರ್ ಧವನ್ 7 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ಜೋಶ್ ಹೇಜಲ್ವುಡ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 10 ರನ್ (11 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಆ ಬಳಿಕ ಬಂದ ರಿಷಬ್ ಪಂತ್, ಒಂದು ಕಡೆಯಲ್ಲಿ ಆರಂಭಿಕನಾಗಿ ಬಂದು ಅಬ್ಬರಿಸುತ್ತಿದ್ದ ಪೃಥ್ವಿ ಶಾ ಜೊತೆಗೂಡಿ ಇನ್ನಷ್ಟು ರನ್ ಹೆಚ್ಚಿಸಲು ಆರಂಭಿಸುತ್ತಿದ್ದಂತೆ, ಪೃಥ್ವಿ ಶಾ 60 ರನ್ (34 ಎಸೆತ 7 ಬೌಂಡರಿ, 3 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ಶಿಮ್ರಾನ್ ಹೆಟ್ಮಾಯೆರ್ ಜೊತೆಗೂಡಿದ ಪಂತ್ ಅಬ್ಬರಿಸಲು ಆರಂಭಿಸಿದರು. ಈ ಜೊಡಿ 5ನೇ ವಿಕೆಟ್ಗೆ 83 ರನ್ (50 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಹೆಟ್ಮಾಯೆರ್ 37 ರನ್ (24 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟಾದರು.
ಚೆನ್ನೈ ಪರ ಜೋಶ್ ಹೇಜಲ್ವುಡ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ಮೊಯಿನ್ ಆಲಿ ಮತ್ತು ಬ್ರಾವೋ ತಲಾ ಒಂದು ವಿಕೆಟ್ ಪಡೆದರು.
ನಿರ್ಮಾಪಕ ಜಕ್ಕಿ ಬಗ್ ನಾನಿ ಜತೆ ನಟಿ ರಾಕುಲ್ ಪ್ರೀತ್ ಸಿಂಗ್ ರಿಲೇಷನ್’ಶಿಪ್