ಚೆನ್ನೈ: ತಲೆಗೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಂತೆ ತಾಯಿ ಒತ್ತಾಯಿಸಿದ್ದರಿಂದ ಬೇಸತ್ತು ಚೆನ್ನೈ ನ ಅಪ್ರಾಪ್ತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್ ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಪೊಂಗಲ್ ಹಬ್ಬಕ್ಕಾಗಿ ಮನೆಗೆ ಬಂದಾಗ, ಆತನ ಉದ್ದ ಕೂದಲಿಗೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಬಲವಂತವಾಗಿ ಕ್ಷೌರಿಕನ ಅಂಗಡಿಗೆ ಕರೆದುಕೊಂಡು ಹೋಗಿ ತಲೆ ಕೂದಲನ್ನು ಕತ್ತರಿಸುವಂತೆ ಒತ್ತಡ ಹೇರಿದ್ದರು. ಅಂದು ಸಂಜೆ ಆಕೆ ಕೆಲಸ ಮುಗಿಸಿ ಮನೆಗೆ ಬಂದಾಗ ಮಗನ ಮೃತದೇಹ ಫ್ಯಾನಿಗೆ ನೇತಾಡುತ್ತಿರುವುದು ಪತ್ತೆಯಾಗಿತ್ತು.