ತಿರುವನಂತಪುರಂ: ಬೆಂಗಳೂರಿನ ಮೆಜೆಸ್ಚಿಕ್ ಬಸ್ ನಿಲ್ದಾಣದಲ್ಲಿ ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗುವನ್ನು ಅಪಹರಿಸಿದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಜೋಸೆಫ್ ಜಾನ್ ಎಂದು ಗುರುತಿಸಲಾಗಿದೆ.
ಐಸ್ ಕ್ರೀಂ ತೆಗೆದು ಕೊಡ್ತಿನಿ ಎಂದು ಆಮಿಷ ಒಡ್ಡಿ ಮಗುವನ್ನು ಅಪಹರಿಸಲಾಗಿತ್ತು ಎಂದು ವರದಿಯಾಗಿದೆ. ರಾತ್ರಿ ತಿರುವನಂತಪುರಂ ಬಳಿ ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಜೋಸೆಫ್ ಜಾನ್ ವರ್ತನೆ ಕುರಿತು ಸಂಶಯ ಬಂದಿತ್ತು. ಮಗು ಒಂದೇ ಸವನೆ ಅಳುತ್ತಿತ್ತು. ವಿಚಾರಣೆ ನಡೆಸಿದಾಗ ಸತ್ಯ ಹೊರಬಿತ್ತು.
ಮಗು ನಾಪತ್ತೆಯಾದ ಬಗ್ಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆತ್ತವರು ಮೊಕದ್ದಮೆ ದಾಖಲಿಸಿದ್ದರು