ಲಕ್ನೋ: ಉತ್ತರಪ್ರದೇಶದ ಫರೂಖಾಬಾದ್ ನಲ್ಲಿ ದುಷ್ಕರ್ಮಿಯೊಬ್ಬ ಒತ್ತೆಸೆರೆಯಲ್ಲಿರಿಸಿದ್ದ 20 ಮಕ್ಕಳನ್ನು ರಕ್ಷಿಸಲಾಗಿದೆ. ಉತ್ತರ ಪ್ರದೇಶ ವಿಶೇಷ ಪೊಲೀಸ್ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಲ ಮಕ್ಕಳನ್ನು ರಕ್ಷಿಸಲಾಗಿದೆ. ಆರೋಪಿ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಹುಟ್ಟುಹಬ್ಬ ಆಚರಣೆಗೆ ಮಕ್ಕಳನ್ನು ಆಹ್ವಾನಿಸಿದ್ದ ಆರೋಪಿ ಬಳಿಕ ಎಲ್ಲ ಮಕ್ಕಳನ್ನು ಒತ್ತೆ ಸೆರೆಯಲ್ಲಿ ಇರಿಸಿದ್ದ. 10 ಗಂಟೆಗಳ ಬಳಿಕ ಈ ಮಕ್ಕಳನ್ನು ರಕ್ಷಿಸಲಾಗಿದ್ದು, ಪೊಲೀಸ್ ತಂಡಕ್ಕೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ