ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ದೇಶದ ಅತೀ ಗಣ್ಯ ವ್ಯಕ್ತಿಗಳ ಚಟುವಟಿಕೆ ಕುರಿತಂತೆ ಸೈಬರ್ ಬೇಹುಗಾರಿಕೆ ನಡೆಸಲು ಚೀನಾದ ಕಂಪೆನಿಗಳು ಯತ್ನ ನಡೆಸಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಎಲ್ಲ ಮಾಹಿತಿ ಸಂಗ್ರಹಿಸಿ ವರದಿ ಸಿದ್ದಪಡಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಚೀನಾ ಕಂಪೆನಿಗಳು ದೇಶದ ಅತ್ಯುನ್ನತ ರಾಜಕಾರಣಿಗಳು, ಸೇನಾ ಮುಖ್ಯಸ್ಥರು ಮತ್ತು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಮಾಹಿತಿ ಕಲೆ ಹಾಕಿ ಅವರ ಮೇಲೆ ಸೈಬರ್ ಬೇಹುಗಾರಿಕೆ ನಡೆಸುತ್ತಿವೆ ಎಂಬ ವರದಿ ಸೋಮವಾರ ಪ್ರಕಟವಾಗಿತ್ತು.
ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಪಟ್ಟಿಯಲ್ಲಿದ್ದಾರೆ. ಉಭಯ ನಾಯಕರ ಮಾಹಿತಿಯನ್ನು ಚೀನಾ ಕಂಪೆನಿ ಕಲೆಹಾಕಿ ಅವರ ವಿರುದ್ದ ಬೇಹುಗಾರಿಕೆ ನಡೆಸುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.