ನವದೆಹಲಿ: ಭಾರತ ಸರ್ಕಾರ ಆಪ್’ಗಳನ್ನು ನಿಷೇಧಿಸಿದ್ದರಿಂದ ತತ್ತರಿಸಿರುವ ಚೀನಾ, ಈಗ ಬೆದರಿಕೆಯ ಹಾಗೂ ಒತ್ತಡದ ತಂತ್ರವೊಡ್ಡುತ್ತಿದೆ.
ಚೀನಾ ಕಂಪನಿಗಳ ಒತ್ತಡಕ್ಕೆ ಕಂಗಾಲಾಗಿರುವ ಝಿನ್ ಪಿಂಗ್ ಸರ್ಕಾರ ಇದೀಗ ಭಾರತಕ್ಕೆ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಡ ಹೇರಲಾರಂಭಿಸಿದೆ. ಚೀನಾದ 106 ಮೊಬೈಲ್ ಅಪ್ಲಿಕೇಷನ್’ಗಳನ್ನು ಭಾರತ ಬ್ಯಾನ್ ಮಾಡಿದ ಬಳಿಕ ಚೀನಾ ಕಂಪನಿಗಳು ಝಿನ್ ಪಿಂಗ್ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು, ಈ ಒತ್ತಡ ತಾಳಲಾರದೆ ಭಾರತದಲ್ಲಿರುವ ತನ್ನ ರಾಯಭಾರಿಯ ಮೂಲಕ ಹೇಳಿಕೆ ಕೊಡಿಸಿದೆ. ಭಾರತ ತಕ್ಷಣ App ಬ್ಯಾನ್ ಮಾಡಿರುವ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು, ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಒತ್ತಾಯಪೂರ್ವಕ ಬೇಡಿಕೆ ಇಟ್ಟಿದೆ.
ಚೀನಾ ವ್ಯವಹಾರ ಸೇರಿದಂತೆ ಭಾರತದಲ್ಲಿನ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಜಿ ರಾಂಗ್ ಮಂಗಳವಾರ ಹೇಳಿದ್ದಾರೆ.
ಚೀನಾ ಹಾಗೂ ಚೀನಾ ನಡುವಣ ಪ್ರಾಯೋಗಿಕ ಸಹಕಾರದಿಂದ ಪರಸ್ಪರ ಲಾಭವಾಗಲಿದೆ. ಅಂತಹ ಸಹಕಾರದಲ್ಲಿ ಭಾರತದ ಕಡೆಯಿಂದ ಉದ್ದೇಶಪೂರ್ವಕ ಹಸ್ತಕ್ಷೇಪವು ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ. ಚೀನಾ ಕಂಪನಿಗಳ ಹಿಂತಾಸಕ್ತಿ ಮತ್ತು ಕಾನೂನುಬದ್ಧ ಹಕ್ಕಗಳ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಚೀನಾ ಕೈಗೊಳ್ಳಲಿದೆ ಎಂದು ರಾಂಗ್ ತಿಳಿಸಿದ್ದಾರೆ.
59 ಚೀನಾ ಆಪ್ ನಿಷೇಧ ಮಾಡಿದ ಒಂದು ತಿಂಗಳ ನಂತರ ಮತ್ತೆ 47 ಆಪ್ ಗಳನ್ನು ಭಾರತ ಬ್ಯಾನ್ ಮಾಡಿದೆ. ಈ ಆಪ್ ಗಳ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ, ಟಿಕ್ ಟಾಕ್ ಲೈಟ್, ಹಲೋ ಲೈಟ್, ಶೇರ್ ಹಿಟ್ ಲೈಟ್, ಬಿಗೊ ಲೈವ್ ಲೈಟ್ ಕೂಡಾ ಈ ಪಟ್ಟಿಯಲ್ಲಿವೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
App ನಿಷೇಧ ಮರುಪರಿಶೀಲನೆಗೆ ಚೀನಾ ಒತ್ತಡ
Follow Us