newsics.com
ನವದೆಹಲಿ: ಲಡಾಖ್ ಗಡಿಭಾಗದಲ್ಲಿ ಕಳೆದ ತಿಂಗಳು ಭಾರತ-ಚೀನಾ ಮಧ್ಯೆ ಉದ್ವಿಗ್ನ ಸ್ಥಿತಿ ಹೆಚ್ಚಿದ್ದಾಗಲೇ ಚೀನಾದ ಅನ್ವೇಷಣಾ ನೌಕೆಯೊಂದು ಹಿಂದು ಮಹಾಸಾಗರ ಪ್ರವೇಶಿಸಿದ್ದನ್ನು ಭಾರತದ ನೌಕಾಪಡೆ ಪತ್ತೆಹಚ್ಚಿತ್ತು ಎಂದು ಮೂಲಗಳು ತಿಳಿಸಿವೆ.
ಮಲಕ್ಕಾ ಜಲಸಂಧಿಯ ಮೂಲಕ ಯುವಾನ್ ವಾಂಗ್ ಹೆಸರಿದ ಅನ್ವೇಷಣಾ ನೌಕೆ ಹಿಂದು ಮಹಾಸಾಗರ ಪ್ರವೇಶಿಸಿತ್ತು. ಇದನ್ನು ಪತ್ತೆಹಚ್ಚಿದ ಭಾರತದ ನೌಕಾಸೇನೆಯ ಯುದ್ಧನೌಕೆ ನಿರಂತರ ಹಿಂಬಾಲಿಸಿತ್ತು. ಕೆಲ ದಿನದ ಹಿಂದೆ ಯುವಾನ್ ವಾಂಗ್ ಹಡಗು ಚೀನಾಕ್ಕೆ ಮರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತದ ಸಮುದ್ರವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ಬೇಹುಗಾರಿಕೆ ನಡೆಸಲು ಈ ನೌಕೆಯನ್ನು ಚೀನಾದ ಅಧಿಕಾರಿಗಳು ಬಳಸಿರುವ ಸಾಧ್ಯತೆಯಿದೆ. ಭಾರತೀಯ ವಿಶೇಷ ಆರ್ಥಿಕ ವಲಯ(ಇಇಝೆಡ್)ನಲ್ಲಿ ಸಂಶೋಧನೆ ಅಥವಾ ಅನ್ವೇಷಣಾ ಕಾರ್ಯ ನಡೆಸಲು ವಿದೇಶಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಭಾರತದ ಅಧಿಕಾರಿಗಳು ಸೂಚಿಸಿದ ಬಳಿಕ ಚೀನಾ ನೌಕೆ ವಾಪಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾ ಮಾದರಿ ದಾಳಿಗೆ ಸಂಚು; 52 ಕೆಜಿ ಸ್ಫೋಟಕ ವಶ