newsics.com
ನವದೆಹಲಿ: ನಾಲ್ಕು ವರ್ಷದ ಅವಧಿಯಲ್ಲಿ ದೇಶದ 1,600ಕ್ಕೂ ಹೆಚ್ಚು ಕಂಪನಿಗಳಿಗೆ ಚೀನಾದಿಂದ 1 ಬಿಲಿಯನ್ ಡಾಲರ್ ಹಣ ಸಂದಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
46 ಕ್ಷೇತ್ರಗಳಲ್ಲಿನ ವಿವಿಧ ಕಂಪನಿಗಳಿಗೆ 2016 ರ ಏಪ್ರಿಲ್ ನಿಂದ ಮಾರ್ಚ್ 2020 ರ ಅವಧಿಯಲ್ಲಿ ಪ್ರಮುಖವಾಗಿ ಸ್ಟಾರ್ಟ್ ಅಪ್ ಗಳಲ್ಲಿ 1 ಬಿಲಿಯನ್ ಡಾಲರ್’ನಷ್ಟು ಮೊತ್ತ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆಯ ರೂಪದಲ್ಲಿ ಹರಿದುಬಂದಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಂದರೆ 172 ಮಿಲಿಯನ್ ಡಾಲರ್ ಆಟೋಮೊಬೈಲ್ ಕ್ಷೇತ್ರಕ್ಕೆ ಬಂದಿದೆ. ಆಟೋಮೊಬೈಲ್ ಕ್ಷೇತ್ರ, ಪುಸ್ತಕ ಮುದ್ರಣ, ಎಲೆಕ್ಟ್ರಾನಿಕ್ಸ್, ಸೇವೆಗಳು ಹಾಗೂ ಎಲೆಕ್ಟ್ರಿಕಲ್ ಉಪಕರಣ ಕ್ಷೇತ್ರಗಳಲ್ಲಿ 100 ಮಿಲಿಯನ್ ಡಾಲರ್ ಗೂ ಅಧಿಕ ಎಫ್ ಡಿಐ ಹರಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
4 ವರ್ಷದಲ್ಲಿ ಭಾರತಕ್ಕೆ ಚೀನಾದ 1 ಬಿಲಿಯನ್ ಡಾಲರ್ ಹಣ!
Follow Us