Tuesday, April 13, 2021

ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ

ಮುಂಬೈ: ತಮ್ಮ ವಿಶಿಷ್ಟವಾದ ನೃತ್ಯ ಸಂಯೋಜನೆಯಿಂದ ಮನೆ ಮಾತಾಗಿದ್ದ ಸರೋಜ್ ಖಾನ್ ಇನ್ನಿಲ್ಲ. ಹೃದಯಾಘಾತದಿಂದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅವರಿಗೆ 71 ವರ್ಷ ಪ್ರಾಯವಾಗಿತ್ತು. ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಖಾನ್, ಕಂಗನಾ ಅವರ ಹಲವು ಚಿತ್ರಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು.  ಮಾಧುರಿ ದೀಕ್ಷಿತ್ ಅಭಿನಯದ ತೇಜಾಬ್ ಚಿತ್ರದ ಜನಪ್ರಿಯ ಹಾಡು ಏಕ್ ದೋ ತೀನ್ ಹಾಡಿಗೆ ಸರೋಜ್ ಖಾನ್ ಅವರ  ನೃತ್ಯ ಸಂಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಭಿಷೇಕ್ ಬಚ್ಚನ್ ಅವರ ಮೊದಲ ಚಿತ್ರ ರೆಫ್ಯೂಜಿ ಗೆ  ಸರೋಜ್ ಖಾನ್ ನೃತ್ಯ ನಿರ್ದೇಶಕರಾಗಿದ್ದರು. ಸರೋಜ್ ಖಾನ್ ಅಗಲಿಕೆಗೆ ಕಂಬನಿ ಮಿಡಿದಿರುವ ಅಭಿಷೇಕ್ ಬಚ್ಚನ್, ತಾನು ಮೊದಲು ನೃತ್ಯ ಕಲಿತದ್ದು ತಮ್ಮಿಂದ ಎಂದು ಭಾವುಕರಾಗಿ ಹೇಳಿದ್ದಾರೆ.  ಸರೋಜ್ ಖಾನ್ ಅವರು ಮಾಸ್ಚರ್ ಜಿ ಎಂದೇ ಹಿಂದಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. 40 ವರ್ಷಗಳಿಂದ ಅವರು ಹಿಂದಿ ಚಿತ್ರರಂಗದಲ್ಲಿ ಸರೋಜ್ ಖಾನ್ ತಮ್ಮನ್ನು ತೊಡಗಿಸಿಕೊಂಡಿದ್ದರು

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!