Wednesday, November 30, 2022

ಹತ್ತನೇ ತರಗತಿ ವಿದ್ಯಾರ್ಥಿಗೆ ಸಹಪಾಠಿಗಳಿಂದಲೇ ಲೈಂಗಿಕ ದೌರ್ಜನ್ಯ, ಬಾಲಕ ಅಸ್ವಸ್ಥ

Follow Us

newsics.com

ಚೆನ್ನೈ (ತಮಿಳುನಾಡು): ಸರ್ಕಾರಿ ಶಾಲೆಯಲ್ಲಿ ಸಹಪಾಠಿಗಳೇ ಹತ್ತನೇ ತರಗತಿಯ ವಿದ್ಯಾರ್ಥಿಗೆ ಲೈಂಗಿಕ‌ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಸರಣಿ ಟ್ವೀಟ್ ಮೂಲಕ ಚೆನ್ನೈನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಚೆನ್ನೈನ ಅಶೋಕ್‌ನಗರದ ಕೇಂದ್ರ ಸರ್ಕಾರಿ ಶಾಲೆಯೊಂದರಲ್ಲಿ 10ನೇ ತರಗತಿಯ ನಾಲ್ವರು ಬಾಲಕರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಹಪಾಠಿ ವಿದ್ಯಾರ್ಥಿಗೆ ನಿರಂತರವಾಗಿ ಬೆದರಿಸಿ, ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಆರೋಪಿಸಿದ್ದಾರೆ.

ಬಾಲಕನಿಗೆ ದೈಹಿಕ ಹಿಂಸೆ ನೀಡಿದ್ದಾರೆ. ಬಾಲಕನನ್ನು ಶಾಲೆಯ ಸ್ನಾನಗೃಹಕ್ಕೆ ಕರೆದೊಯ್ದು ಅಲ್ಲಿ ಬಲವಂತವಾಗಿ ಹಸ್ತಮೈಥುನ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಅಲ್ಲದೆ ಬಾಲಕನನ್ನು ಟೆರೇಸ್‌ನಿಂದ ತಳ್ಳುವುದಾಗಿ ಆರೋಪಿ ಬಾಲಕರು ಬೆದರಿಸಿದ್ದಾರೆನ್ನಲಾಗಿದೆ.

ಸಂತ್ರಸ್ತ ಬಾಲಕನ ತಾಯಿ ಅರೊಪಿ ಬಾಲಕರ ಕಾಲಿಗೆ ಬಿದ್ದು ತನ್ನ ಮಗನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡು, ಸ್ನೇಹಿತರಾಗಿರುವಂತೆ ತಾಯಿ ಮನವಿ ಮಾಡಿದ್ದರು. ಅದರೆ ನಂತರವೂ ಬಾಲಕನ ಬಳಿಗೆ ಬಂದ ಆರೋಪಿಗಳು ಆತನಿಗೆ ಪೋರ್ನ್ ವೀಕ್ಷಿಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ತ ಬಾಲಕನ ತಾಯಿಯೊಂದಿಗೆ ಸಂಭೋಗ ಮಾಡಲು ಬಯಸುತ್ತೇವೆ ಎಂದು ಆರೋಪಿ ಬಾಲಕರು ಹೇಳಿದಲ್ಲದೇ, ನಿನ್ನ ತಂದೆ-ತಾಯಿ ಸಂಭೋಗ ಮಾಡುವುದನ್ನು ನೋಡುವಂತೆ ಸಂತ್ರಸ್ತ ಬಾಲಕನಿಗೆ ಒತ್ತಾಯಿಸಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ದೂರಿದ್ದಾರೆ.

ಸಂತ್ರಸ್ತ ಬಾಲಕನ ತಂದೆ ಪೊಲೀಸರ ಬಳಿ ಹೋಗಿದ್ದು, ಆರೋಪಿ ಬಾಲಕರ ಭವಿಷ್ಯ ಹಾಳು ಮಾಡಬೇಡಿ. ಇದನ್ನು ಬಿಟ್ಟು ಇಲ್ಲಿಗೆ ಬಿಟ್ಟು ಬಿಡಿ ಎಂದು ಬುದ್ಧಿವಾದ ಹೇಳಿದ್ದಾರೆಂದು ಬಾಲಕನ ತಂದೆ ತಿಳಿಸಿದ್ದಾರೆನ್ನಲಾಗಿದೆ.

ಈಗ ಸಂತ್ರಸ್ತ ಬಾಲಕ ವಾಂತಿ, ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರತಿಯೊಂದಕ್ಕೂ ಬಾಲಕ ಹೆದರುತ್ತಿದ್ದಾನೆ. ಯಾರಾದರೂ ಅವರ ಹತ್ತಿರಕ್ಕೆ ಬಂದರೆ ಅಥವಾ ಮುಟ್ಟಿದರೆ ಅವರನ್ನು ದ್ವೇಷಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಶಾಲೆಯ ಆಡಳಿತ ಮಂಡಳಿಯರಾಗಲಿ ಅಥವಾ ಪೊಲೀಸರಾಗಲಿ ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಚೀನಾದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳ: ಲಾಕ್ ಡೌನ್ ಜಾರಿ

ಮಂಗಳೂರಿನ ಕದ್ರಿ ಸಹಿತ ಪ್ರಮುಖ ದೇವಸ್ಥಾನಗಳು ಟಾರ್ಗೇಟ್?

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!