newsics.com
ತಿರುವನಂತಪುರಂ: ದೇವಸ್ಥಾನದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಇಡುಕ್ಕಿ ಮೂಲದ ವ್ಯಕ್ತಿ 12 ಕೋಟಿ ಲಾಟರಿ ಗೆದ್ದಿದ್ದಾನೆ.
ಎರ್ನಾಕುಲಂನ ಕಡವಂತ್ರಾದ ಪೊನ್ನೆತ್ ದೇಗುಲದಲ್ಲಿ ಕ್ಲರ್ಕ್ ಆಗಿರುವ ಅನಂತು ವಿಜಯನ್ (24) ಲಾಟರಿ ಗೆದ್ದ ಅದೃಷ್ಟಶಾಲಿ. ತೆರಿಗೆ ಎಲ್ಲಾ ಕಡಿತವಾಗಿ 7.56 ಕೋಟಿ ರೂ. ವಿಜಯನ್ ಕೈಸೇರಲಿದೆ.
ಲಾಟರಿ ಬಹುಮಾನ ಘೋಷಣೆಗೂ ಕೆಲವೇ ಗಂಟೆ ಮುನ್ನ ಸ್ನೇಹಿತರ ಜತೆ ತಮಾಷೆ ಮಾಡಿದ್ದ ಅನಂತು ವಿಜಯನ್, ಈ ಬಾರಿ ಪ್ರಥಮ ಬಹುಮಾನ ಗೆಲ್ಲುವುದಾಗಿ ಹೇಳಿದ್ದ. ಸೋರುತ್ತಿರುವ ಮನೆ, ಕಿತ್ತು ಹೋದ ಮಾಳಿಗೆ, ಇನ್ನೇನು ಬಿದ್ದು ಹೋಗುವ ಹಂತದಲ್ಲಿರುವ ಸೂರು ಅನಂತು ಮತ್ತು ಆತನ ಕುಟುಂಬವನ್ನು ಕಂಗಾಲಾಗಿಸಿತ್ತು. ಕೇರಳದ ಇಡುಕ್ಕಿಯಲ್ಲಿ ಬಡತನದಲ್ಲೇ ನರಳುತ್ತಿದ್ದ ಅನಂತು ಕುಟುಂಬಕ್ಕೆ ಮನೆ ರಿಪೇರಿ ಮಾಡಿಸಲೂ ಹಣವಿರಲಿಲ್ಲ. ಆದರೆ ‘ತಿರುಓಣಂ ಬಂಪರ್’ ಲಾಟರಿ ಅನಂತು ವಿಜಯನ್ ಅವರ ಬದುಕನ್ನೇ ಬದಲಿಸಿದೆ.
10 ಬಾರಿ ಎವರೆಸ್ಟ್ ಏರಿದ್ದ ‘ಹಿಮದ ಚಿರತೆ’ ಇನ್ನಿಲ್ಲ
ಅ.3ರಂದು ವಿಶ್ವದ ಅತಿ ಉದ್ದದ ‘ಅಟಲ್ ಸುರಂಗ ಮಾರ್ಗ’ ಲೋಕಾರ್ಪಣೆ