Monday, August 8, 2022

ಶಿವ ಸೈನಿಕನನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ: ಕಳಂಕ ತಪ್ಪಿಸಲು ಪದತ್ಯಾಗ ಮಾಡಿದ ಬಿಜೆಪಿ

Follow Us

newsics.com

ಮುಂಬೈ: ಮೈತ್ರಿಕೂಟದ ದೊಡ್ಡ ಪಕ್ಷವಾಗಿರುವ ಬಿಜೆಪಿ ನಾಯಕ ದೇವೇಂದ್ರ  ಫಡ್ನವೀಸ್ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲಿ ಮನೆ ಮಾಡಿತ್ತು. ಅದು ಸಹಜ ಕೂಡ ಆಗಿತ್ತು.

ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ  ರಾಜ್ಯ ನಾಯಕತ್ವ ಅತ್ಯಂತ ಸಮರ್ಥವಾಗಿದೆ. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಮಧ್ಯೆ ಅತ್ಯಂತ ಸಮನ್ವಯ ಇದೆ.

ಕಳೆದ ಆರು ತಿಂಗಳ ಹಿಂದೆ ಮಾಡಿದ್ದ ಕಾರ್ಯತಂತ್ರ ಇದೀಗ ಫಲ ಕೊಟ್ಟಿರುವುದು ಇದೇ ಕಾರಣಕ್ಕೆ.

ಅಧಿಕಾರದಿಂದ ಕೆಳಗಿಳಿದಿರುವ ಉದ್ಧವ್ ಠಾಕ್ರೆ , ಶಿವಸೇನಾ ವರಿಷ್ಟ ಬಾಳಾ ಸಾಹೇಬ್ ಠಾಕ್ರೆ ಅವರ ಪುತ್ರ. ಠಾಕ್ರೆ ಶಿವಸೇನೆಯ ಸಂಸ್ಥಾಪಕ. ಕಠೋರ  ಹಿಂದುತ್ವವಾದಿ.

ಅಯೋಧ್ಯೆಯಲ್ಲಿ ವಿವಾದಾಸ್ಪದ ಕಟ್ಟಡ ಉರುಳಿ ಬಿದ್ದಾಗ ಅದು ಶಿವಸೇನಾ ಕಾರ್ಯಕರ್ತರ ಕೃತ್ಯ ಎಂದು ಬಹಿರಂಗವಾಗಿ ಹೇಳಿಕೆ   ನೀಡಿದವರು ಬಾಳಾ ಸಾಹೇಬ್ ಠಾಕ್ರೆ.

ಇದರಿಂದ ಸಹಜವಾಗಿ ಮರಾಠಿಗರಲ್ಲಿ  ಅದರಲ್ಲಿ ಮುಖ್ಯವಾಗಿ ಶಿವಸೇನಾ ಕಾರ್ಯಕರ್ತರಲ್ಲಿ ಠಾಕ್ರೆ ಮನೆತನದ ಬಗ್ಗೆ ಅಪಾರ ಗೌರವ ಇದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಭಾಷಣ ಮಾಡಿದ ಉದ್ಧವ್ ಠಾಕ್ರೆ , ಬಾಳಾ ಸಾಹೇಬ್ ಮಗನಿಗೆ  ಪಕ್ಷದವರೇ ಹಿಂದಿನಿಂದ ಚೂರಿ ಹಾಕಿದ್ದಾರೆ ಎಂದು ಹೇಳಿದ್ದರು. ಇದು ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಗಳಿತ್ತು.

ಇದೀಗ ಮುಖ್ಯಮಂತ್ರಿ  ಪದವಿಯಲ್ಲಿ ಮತ್ತೊಬ್ಬ ಶಿವಸೇನಾ ಕಾರ್ಯಕರ್ತನನ್ನು  ಪ್ರತಿಷ್ಟಾಪಿಸುವ ಮೂಲಕ ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವುದೇ ಬಿಜೆಪಿಯ ಗುರಿಯಾಗಿದೆ. ಅದಕ್ಕಾಗಿ ದೇವೇಂದ್ರ  ಫಢ್ನವೀಸ್ ಹೃದಯ ವೈಶ್ಯಾಲತೆ ಮೆರೆದಿದ್ದಾರೆ. ರಾಜಕೀಯ ಪ್ರಬುದ್ದತೆ ಪ್ರದರ್ಶಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...
- Advertisement -
error: Content is protected !!