Thursday, December 7, 2023

58 ಮತದಾರರ ಭೇಟಿಗಾಗಿ 11 ಗಂಟೆ ಅವಧಿಯಲ್ಲಿ 24 ಕಿ.ಮೀ. ನಡೆದ ಸಿಎಂ!

Follow Us

newsics.com
ಗುವಾಹಟಿ: ತಮ್ಮ ವಿಧಾನಸಭಾ ಕ್ಷೇತ್ರದ 58 ಮತದಾರರನ್ನು ಭೇಟಿಯಾಗಲು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು 24 ಕಿ.ಮೀ. ನಡೆದು ಅಚ್ಚರಿ ಮೂಡಿಸಿದ್ದಾರೆ. 11 ಗಂಟೆ ಕಾಲ ನಡೆದು ತಮ್ಮವರನ್ನು ಭೇಟಿಯಾಗಿದ್ದಾರೆ.
ಸಿಎಂ ಪೆಮಾ ಖಂಡು ಅವರು ತಮ್ಮ ಕ್ಷೇತ್ರದ 58 ಮತದಾರರ ಕಷ್ಟ-ಸುಖ ಅರಿಯಲು ಸ್ವತಃ ತಾವೇ 24 ಕಿ.ಮೀ ನಡೆದಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಯ ಲುಗುಥಾಂಗ್‌ ಎಂಬ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಕುಗ್ರಾಮಕ್ಕೆ ನಡೆದು ಸಾಗಿದ್ದಾರೆ. ಈ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದಲ್ಲಿರುವ ಈ ಗ್ರಾಮದಲ್ಲಿ ಕೇವಲ 10 ಕುಟುಂಬಗಳ 58 ಸದಸ್ಯರು ವಾಸಿಸುತ್ತಿದ್ದಾರೆ. ಅಲ್ಲಿಯೇ 2 ದಿನ ಕಳೆದ ಸಿಎಂ ಖಂಡು, ಮತದಾರರ ಸಮಸ್ಯೆ ಆಲಿಸಿ ಮರಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಪೆಮಾ ಖಂಡು, 24 ಕಿ.ಮೀ ಚಾರಣ, 11 ಗಂಟೆಗಳ ತಾಜಾ ಗಾಳಿ ಮತ್ತು ಪ್ರಕೃತಿ ಅತ್ಯುತ್ತಮ. ತವಾಂಗ್ ಜಿಲ್ಲೆಯ ಕಾರ್ಪು-ಲಾದಿಂದ ಲುಗುಥಾಂಗ್ ದಾಟಿದೆ. ಸ್ವರ್ಗ ಸ್ಪರ್ಶಿಸಿದ ಅನುಭವವಾಯಿತು’ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!