newsics.com
ರಾಯ್ ಪುರ: ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯಲ್ಲಿ ಕಾರ್ಯಾಚರಣೆ ವೇಳೆ ಒತ್ತೆ ಸೆರೆಯಲ್ಲಿ ಇರಿಸಲಾಗಿದ್ದ ಕೋಬ್ರಾ ಕಮಾಂಡೋ ಪಡೆಯ ಸದಸ್ಯನನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾರೆ.
ಯಾವುದೇ ಷರತ್ತುಗಳಿಲ್ಲದೆ ಮಾವೋವಾದಿಗಳು ಕೋಬ್ರಾ ಕಮಾಂಡರ್ ರಾಜೇಶ್ವರ್ ಸಿಂಗ್ ಅವರನ್ನು ಬಂಧಮುಕ್ತಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ರಾಜೇಶ್ವರ್ ಸಿಂಗ್ ಬಿಡುಗಡೆ ಸಂಬಂಧ ಸಂಧಾನಕಾರರನ್ನು ನೇಮಕ ಮಾಡುವಂತೆ ಮಾವೋವಾದಿಗಳು ಸೂಚಿಸಿದ್ದರು. ಸರ್ಕಾರ ಈ ಮನವಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ತಮ್ಮ ಅಡಗುತಾಣ ಪತ್ತೆ ಹಚ್ಚಬಹುದು ಎಂಬ ಭೀತಿಯಿಂದ ಮಾವೋವಾದಿಗಳು ಯೋಧನನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.