ನವದೆಹಲಿ: ಭಾರತದ 130 ಕೋಟಿ ಜನಸಂಖ್ಯೆಗೆ ಅನ್ವಯವಾಗುವ ಸರ್ಕಾರದ ವಾರ್ಷಿಕ ಬಜೆಟ್, ದೇಶದ 63 ಕೋಟ್ಯಧಿಪತಿಗಳ ಒಟ್ಟು ಆಸ್ತಿಗೆ ಸಮನಾಗಿದೆಯಂತೆ!
ವಿಶ್ವ ಆರ್ಥಿಕ ಫೋರಂ ನ 50 ನೇ ವಾರ್ಷಿಕ ಸಭೆಯಲ್ಲಿ ಮಂಡನೆಯಾದ ‘ಟೈಮ್ ಟು ಕೇರ್’ ಅಧ್ಯಯನ ವರದಿ ಪ್ರಕಾರ, ಭಾರತದ ಶೇ. 1ರಷ್ಟು ಸಿರಿವಂತ ಜನರ ಆಸ್ತಿ, ದೇಶದ 953 ಮಿಲಿಯನ್ ಜನರ ಆಸ್ತಿಗಿಂತ ನಾಲ್ಕು ಪಟ್ಟು ಹೆಚ್ಚಿದೆ.