Saturday, November 27, 2021

‘ನಿಮಗೂ ಕೊರೋನಾ ಬರಲಿ’ ಎಂದು ಜಡ್ಜ್ ಗೆ ಶಾಪ ಹಾಕಿದ ವಕೀಲ!

Follow Us

ಕೊಲ್ಕತ್ತಾ: ತನ್ನ ಕಕ್ಷಿದಾರರ ಪರ ತೀರ್ಪು ನೀಡಲಿಲ್ಲ ಎಂಬ ಕಾರಣಕ್ಕೆ ವಕೀಲರೊಬ್ಬರು ‘ನಿಮಗೂ ಕೊರೋನಾ ವೈರಸ್ ಬರಲಿ’ ಎಂದು ನ್ಯಾಯಾಧೀಶರಿಗೆ ಶಾಪ ಹಾಕಿದ್ದಾರೆ.
ಕೋಲ್ಕತಾ ಮೂಲದ ವಕೀಲ ಬಿಜೋಯ್ ಅಧಿಕಾರಿ ಅವರು ನ್ಯಾಯಮೂರ್ತಿಗಳಿಗೆ ಕೊರೋನಾ ವೈರಸ್ ಬರಲಿ ಎಂದು ಶಾಪ ಹಾಕಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ತನ್ನ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ಆತನ ಪರವಾಗಿ ತೀರ್ಪು ನೀಡದ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ವಿರುದ್ಧ ಆಕ್ರೋಶ ಹೊರಹಾಕಿದ ವಕೀಲ ಬಿಜೋಯ್ ಅಧಿಕಾರಿ ಜಡ್ಜ್​ಗೆ ಕೊರೋನಾ ಸೋಂಕು ಬರಲಿ ಎಂದು ಶಾಪ ಹಾಕಿದ್ದಾರೆ.
ವಕೀಲ ಬಿಜೋಯ್ ಅಧಿಕಾರಿ ವಿರುದ್ಧ ಜಡ್ಜ್ ದೂರು ನೀಡಿದ್ದು, ಈ ನಡವಳಿಕೆಗೆ ಸ್ಪಷ್ಟನೆ ನೀಡಬೇಕೆಂದು ನ್ಯಾಯಮೂರ್ತಿ ದೀಪಂಕರ್ ದತ್ತ ಗಡುವು ನೀಡಿದ್ದಾರೆ. ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿ, ಶಿಕ್ಷೆ ನೀಡಬೇಕೆಂದು ಆದೇಶಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!