Thursday, December 2, 2021

ಈ ಬಾರಿ ದೇಶದ ಬಹುತೇಕ ಕಡೆ ಸಾಮಾನ್ಯ ಮಳೆ

Follow Us

♦ ಭಾರತೀಯ ಹವಾಮಾನ ಇಲಾಖೆ ಮಾಹಿತಿ

ನವದೆಹಲಿ: ಈ ಬಾರಿಯ ಮುಂಗಾರು ‘ಸಾಮಾನ್ಯ’ವಾಗಿರಲಿದೆ. ಭಾರತದ ಬಹುಪಾಲು ಭಾಗಗಳಲ್ಲಿ ‘ಸಾಮಾನ್ಯ’ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಜುಲೈನಲ್ಲಿ ಬಹುತೇಕ ಕಡೆ ಮಳೆ ಇರುವುದಿಲ್ಲ. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಮಾತ್ರ ‘ಅಧಿಕ’ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಪ್ರಾದೇಶಿಕವಾರು ಮತ್ತು ತಿಂಗಳವಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಲಿದೆ.
ಸೌತ್ ಏಷ್ಯಾ ಸೀಸನಲ್ ಔಟ್ ಲುಕ್ ಫೋರಮ್ ಕೂಡ ಭಾರತದ ಬಹುಪಾಲು ಭಾಗಗಳಲ್ಲಿ ‘ಸಾಮಾನ್ಯ’ ಮಳೆಯಾಗಲಿದೆ ಎಂದೇ ಮುನ್ಸೂಚನೆ ನೀಡಿತ್ತು.
ಈ ಬಾರಿಯೂ ಅತಿವೃಷ್ಟಿ?:
ಕಳೆದ ವರ್ಷದಂತೆ ಈ ವರ್ಷವೂ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಆಂತರಿಕ ಮೌಲ್ಯಮಾಪಕ ಟಿಪ್ಪಣಿ ಸ್ಪಷ್ಟಪಡಿಸಿದೆ.
ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಿಜೋರಾಂ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಹಾಗೂ, ತಮಿಳುನಾಡಿನ ದಕ್ಷಿಣ ಭಾಗ ಮತ್ತು ಕೇರಳದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆಯಿದೆ.
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ವಾಯವ್ಯ ಭಾಗಗಳಲ್ಲಿ ಶೇ.50-60 ರಷ್ಟು ಸಾಮಾನ್ಯ ಮಳೆಯಾಗಲಿದೆ. ಜೂನ್, ಜುಲೈನಲ್ಲಿ ಮಳೆ ಬಹುತೇಕ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಮಳೆಯಾಶ್ರಿತ ಬೆಳೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಒಮಿಕ್ರಾನ್ ಸೋಂಕಿತನ ಐವರು ಸಂಪರ್ಕಿತರಿಗೂ ಕೊರೋನಾ ಪಾಸಿಟಿವ್

newsics.com ಬೆಂಗಳೂರು: ರಾಜ್ಯದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇವರ ಸಂಪರಕದಲ್ಲಿದ್ದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪೈಕಿ ಐವರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ಬಂದಿರುವ...

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...
- Advertisement -
error: Content is protected !!