newsics.com
ಜಮ್ಮು: ಪುಲ್ವಾಮಾ ಮಾದರಿ ದಾಳಿ ನಡೆಸಲು ನಡೆಸಿದ್ದ ಬೃಹತ್ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, 52 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.
ಜಮ್ಮು ಕಾಶ್ಮೀರದ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಕೆರವಾರ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನೆ ಹಾಗೂ ಪೊಲೀಸರು ಸಿಂಟೆಕ್ಸ್ ನಲ್ಲಿ ಅಡಗಿಸಿದ್ದ 125 ಗ್ರಾಂ ತೂಕದ 416 ಪ್ಯಾಕೆಟ್ ಗಳಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಬಾರಿ ಕೂಡ ಭಾರೀ ಪ್ರಮಾಣದ ಸ್ಫೋಟಕಗಳನ್ನು ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಅಡಗಿಸಿದ್ದನ್ನು ಪತ್ತೆ ಹಚ್ಚುವ ಮೂಲಕ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿದ್ದಾರೆ.
ಪುಲ್ವಾಮಾ ಮಾದರಿ ದಾಳಿಗೆ ಸಂಚು; 52 ಕೆಜಿ ಸ್ಫೋಟಕ ವಶ
Follow Us