ನವದೆಹಲಿ: ಇಲ್ಲಿನ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಸೇರಿರುವ ಮೂವರಿಗೆ ಶಂಕಿತ ಕರೋನ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿವೆ. ಮೂವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ಕಳುಹಿಸಲಾಗಿದೆ.
ಚೀನಾದಲ್ಲಿ ಕರೋನ ವೈರಸ್ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ 126 ಕ್ಕೆ ಏರಿದ್ದು, ಸುಮಾರು 1,300 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರದ ಹೊತ್ತಿಗೆ ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಮಂದಿ ಕರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ವುಹಾನ್ ನಗರ ಮತ್ತು ಹುಬೈ ಪ್ರಾಂತ್ಯದಿಂದ 250 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ಮತ್ತು ಚೀನಾದ ಅಧಿಕಾರಿಗಳು ಚರ್ಚಿಸಿದ್ದಾರೆ.
ದೆಹಲಿಯಲ್ಲಿ ಕೊರೊನ ಸೋಂಕು; ಪ್ರಯೋಗಾಲಯಕ್ಕೆ ಮೂವರ ರಕ್ತದ ಮಾದರಿ
Follow Us