newsics.com
ನವದೆಹಲಿ: ಕೊರೋನಾ ಲಾಕ್ ಡೌನ್ ಪರಿಣಾಮ ನಾಲ್ಕೇ ತಿಂಗಳಲ್ಲಿ ದೇಶದಲ್ಲಿ 6.6 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (ಸಿಎಂಐಇ) ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ. ವೈಟ್ ಕಾಲರ್ ಉದ್ಯೋಗಿಗಳ ಪೈಕಿ ಇಂಜಿನಿಯರ್’ಗಳು, ವೈದ್ಯರು ಮತ್ತು ಶಿಕ್ಷಕರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ನಾಲ್ಕು ವರ್ಷಗಳಿಂದ ಸೃಷ್ಟಿಯಾಗಿದ್ದ ಉದ್ಯೋಗಗಳೂ ಕೊರೋನಾ ಲಾಕ್ ಡೌನ್’ನಿಂದ ನಾಶವಾಗಿವೆ. 2016ರ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಹೇಳಿದೆ.
‘ಲೆಮನ್ ಪೆಪ್ಪರ್ ಫಿಶ್’… ವೃದ್ಧಾಪ್ಯ ವಿಳಂಬಕ್ಕೆ ಕೇಂದ್ರ ಸಚಿವರ ಹೊಸ ರೆಸಿಪಿ!
ಗಮನ ಸೆಳೆಯುತ್ತಿದೆ ನಟ ಸುಶಾಂತ್ ಸಿಂಗ್ ಮೇಣದ ಪ್ರತಿಮೆ