newsics.com
ನವದೆಹಲಿ: ಕೊರೋನಾ ಲಸಿಕೆ ಸಿಗುವವರೆಗೆ ನಿರ್ಲಕ್ಷ್ಯ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸಲಹೆ ನೀಡಿದ್ದಾರೆ.
ಜಬ್ ತಕ್ ದವಾಯಿ ನಹಿ ತಬ್ ತಕ್ ದಿಲಾಹಿ ನಹಿ, ದೋ ಗಜ್ ದೂರಿ ಮಾಸ್ಕ್ ಹೈ ಜರೂರಿ (ಲಸಿಕೆ ಲಭಿಸುವ ತನಕ ನಿರ್ಲಕ್ಷ್ಯ ಸಲ್ಲದು, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ) ಎಂದು ಅವರು ಪ್ರಾಸಬದ್ಧ ಘೋಷಣೆ ಮೂಲಕ ದೇಶದ ಜನರಿಗೆ ಕೊರೋನಾ ಮಹಾಮಾರಿ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ಮಾಡಿದ್ದಾರೆ.
ಪ್ರಧಾನಮಂತ್ರಿ ಆವಾಜ್ ಯೋಜನೆ (ಪಿಎಂಎವೈ) ಅಡಿ ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶಗಳಲ್ಲಿ 1.8 ಲಕ್ಷ ಮನೆಗಳ ಗೃಹ ಪ್ರವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೋನಾ ಪಿಡುಗು ಇನ್ನೂ ದೂರವಾಗಿಲ್ಲ. ನಮ್ಮ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಇದು ಅಭಿವೃದ್ಧಿಯಾಗುವವರೆಗೆ ಪ್ರತಿಯೊಬ್ಬರೂ ಜಾಗ್ರತೆಯಿಂದಿರ ಬೇಕು ಎಂದು ಕರೆನೀಡಿದರು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮೋದಿಯವರು ಪುನರುಚ್ಚರಿಸಿದ್ದಾರೆ.
ಲಸಿಕೆ ಸಿಗುವವರೆಗೆ ಕೊರೋನಾ ಭಯವಿರಲಿ
Follow Us