Wednesday, July 6, 2022

ಆಂಧ್ರದಲ್ಲಿ ಒಂದೇ ದಿನ 7998, ತಮಿಳ್ನಾಡಲ್ಲಿ 6472 ಮಂದಿಗೆ ಕೊರೋನಾ ಸೋಂಕು

Follow Us

ಅಮರಾವತಿ: ಆಂಧ್ರಪ್ರದೇಶದಲ್ಲಿ ಗುರುವಾರ (ಜುಲೈ 22) ದಾಖಲೆಯ ಸಂಖ್ಯೆಯಲ್ಲಿ ಅಂದರೆ 7998 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 7998 ಜನರಿಗೆ ಕೊವಿಡ್ ತಗುಲಿದೆ ಎಂದು ಆಂಧ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದುವರೆಗೂ ಆಂಧ್ರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿರಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಇದೇ ಮೊದಲ ಬಾರಿ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಒಂದೇ ದಿನ ಸುಮಾರು 8 ಸಾವಿರ ಕೊವಿಡ್ ಕೇಸ್ ವರದಿಯಾಗಿದೆ. ಈ ಪೈಕಿ ಪೂರ್ವ ಗೋದಾವರಿಯಲ್ಲಿ 1391, ಗುಂಟೂರಿನಲ್ಲಿ 1184, ಅನಂತಪುರದಲ್ಲಿ 1016 ಹಾಗೂ ಕರ್ನೂಲಿನಲ್ಲಿ 904 ಪ್ರಕರಣಗಳು ವರದಿಯಾಗಿವೆ. ಈ ನಾಲ್ಕು ಜಿಲ್ಲೆಗಳಿಂದಲೇ 4500 ಕೇಸ್ ವರದಿಯಾಗಿದೆ.

ಆರೋಗ್ಯ ಇಲಾಖೆ ವಿಳಂಬ, ತಪ್ಪು ಮಾಹಿತಿಗೆ ಜೀವ ತೆತ್ತ ‘ಕೊರೋನಾ ಇಲ್ಲದ’ ಆಟೋ ಡ್ರೈವರ್!

ಆಂಧ್ರದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 72711ಕ್ಕೆ ಏರಿಕೆಯಾಗಿದೆ. ಅದರಲ್ಲಿ 34272 ಪ್ರಕರಣಗಳು ಸಕ್ರಿಯವಾಗಿದ್ದರೆ, 37555 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 884 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಗುರುವಾರ 6472 ಕೇಸ್ ಪತ್ತೆಯಾಗಿದೆ. ಚೆನ್ನೈ ನಗರದಲ್ಲಿ ಮಾತ್ರ 1339 ಕೇಸ್, ತಿರುವಳ್ಳೂರ್ 417 ಕೇಸ್, ಚೆಂಗಲಪಟ್ಟು 393 ಕೇಸ್, ಕಾಂಚಿಪುರಂ 313 ಕೇಸ್, ಮಧುರೈ 279 ಕೇಸ್, ವಿರುಧುನಗರ 480 ಹಾಗೂ ತೂತುಕುಡಿಯಲ್ಲಿ 415 ಕೇಸ್ ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!