Newsics.com
ತಿರುವನಂತಪುರಂ: ಕರ್ನಾಟಕದಲ್ಲಿ 24 ಗಂಟೆಯಲ್ಲಿ 3377 ಕೊರೋನಾ ಪ್ರಕರಣ ದೃಢಪಟ್ಟಿದ್ದರೇ, ಕೇರಳದಲ್ಲಿ ಇದೇ ಅವಧಿಯಲ್ಲಿ 8516 ಕೊರೋನಾ ಪ್ರಕರಣ ವರದಿಯಾಗಿದೆ. ಇದು ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತಿದೆ. ಕೇರಳದಲ್ಲಿ ಬುಧವಾರ ಕೊರೋನಾಕ್ಕೆ 28 ಮಂದಿ ಬಲಿಯಾಗಿದ್ದಾರೆ. 7473 ಮಂದಿಗೆ ಸಂಪರ್ಕದಿಂದ ರೋಗ ತಗುಲಿದೆ.
ಕಾಸರಗೋಡಿನಲ್ಲಿ ಹೊಸದಾಗಿ 182 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೋಗ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಕೇರಳದಲ್ಲಿ ಒಂದೇ ದಿನ 67 ಆರೋಗ್ಯ ಕಾರ್ಯಕರ್ತರು ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. 24 ಗಂಟೆಯಲ್ಲಿ 71, 270 ಪರೀಕ್ಷೆ ನಡೆಸಲಾಗಿದೆ.