ಮುಂಬೈ: ಮಾರಕ ಕೊರೋನಾ ಮುಂಬೈ ಮಹಾನಗರದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 2256 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಮುಂಬೈಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 1, 71, 949ಕ್ಕೆ ತಲುಪಿದೆ.
ಮುಂಬೈ ಮಹಾನಗರದಲ್ಲಿ ಕೊರೋನಾ ಸೋಂಕಿತರಾದ 31,063 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ ಮಾರಕ ಕೊರೋನಾ 31 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಮುಂಬೈಯಲ್ಲಿ 8178ಕ್ಕೆ ತಲುಪಿದೆ