ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ ಮುಂಬೈ ಮಹಾನಗರದಲ್ಲಿ 58 ಮಂದಿಯ ಬಲಿಪಡೆದುಕೊಂಡಿದೆ. ಕೊರೋನಾದಿಂದ ಇದುವರೆಗೆ ಮುಂಬೈಯಲ್ಲಿ 5875 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ದಾಖಲೆ ನಿರ್ಮಾಣವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 10, 576 ಕೊರೋನಾ ಪ್ರಕರಣ ದೃಢಪಟ್ಟಿದೆ. ಇದು ಒಂದು ದಿನದಲ್ಲಿ ವರದಿಯಾದ ಅತ್ಯಧಿಕ ಪ್ರಕರಣವಾಗಿದೆ. ಈ ಹಿಂದೆ ಜುಲೈ 19ರಂದು 9518 ಕೊರೋನಾ ಪ್ರಕರಣ ವರದಿಯಾಗಿತ್ತು.
ಮಹಾರಾಷ್ಟ್ರದಲ್ಲಿ ಒಂದೇ ದಿನ 280 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾದಿಂದಾಗಿ 12, 556 ಮಂದಿ ಮೃತಪಟ್ಟಿದ್ದಾರೆ