newsics.com
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 40,120 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,21,17,826 ಕ್ಕೆ ತಲುಪಿದೆ.
ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 585 ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 4,30,254
ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ3,13,02,345 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 3,85,227 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಕೊರೋನಾ ಸೋಂಕಿತರಾಗಿದ್ದ 42,295 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ 52,95,82,956 ಮಂದಿಗೆ ಲಸಿಕೆ ನೀಡಲಾಗಿದೆ.
11 ದಿನಗಳಲ್ಲಿ ಬೆಂಗಳೂರಿನಲ್ಲಿ 543 ಮಕ್ಕಳಿಗೆ ಕೊರೋನಾ ಸೋಂಕು: ಬಿಬಿಎಂಪಿ ಅಧಿಕೃತ ಮಾಹಿತಿ