ಒಂದೇ ದಿನ 47, 638 ಮಂದಿಗೆ ಕೊರೋನಾ ಸೋಂಕು, 670 ಬಲಿ
Newsics.com ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ. ಒಂದೇ ದಿನದಲ್ಲಿ ಹೊಸದಾಗಿ 47,638 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 84,11, 724ಕ್ಕೆ ತಲುಪಿದೆ. ಕೊರೋನಾ ಸೋಂಕಿತರಾಗಿದ್ದ 77, 65, 966 ಮಂದಿ ಗುಣಮುಖರಾಗಿದ್ದಾರೆ. 5, 20, 773 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಕಳೆದ 24 ಗಂಟೆಯಲ್ಲಿ 670 ಮಂದಿಯ ಪ್ರಾಣ ಕಸಿದುಕೊಂಡಿದೆ. ಕೊರೋನಾದಿಂದ ಇದುವರೆಗೆ 1, 24, 985 ಮಂದಿ ಮೃತಪಟ್ಟಿದ್ದಾರೆ.
Copy and paste this URL into your WordPress site to embed
Copy and paste this code into your site to embed