ಹೈದರಾಬಾದ್: ಮಾರಕ ಕೊರೋನಾ ದೇಶದಲ್ಲಿ ಇದುವರೆಗೆ 99 ವೈದ್ಯರನ್ನು ಇದುವರೆಗೆ ಬಲಿಪಡೆದುಕೊಂಡಿದೆ. 1302 ವೈದ್ಯರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.ಮೃತಪಟ್ಟ ವೈದ್ಯರಲ್ಲಿ 73 ಮಂದಿ ವೈದ್ಯರು 50 ವರ್ಷಕ್ಕಿಂತ ಹೆಚ್ಚು ಪ್ರಾಯದವರಾಗಿದ್ದಾರೆ. ಇದು ಮೃತ ಪಟ್ಟ ಒಟ್ಟು ವೈದ್ಯರ ಶೇಕಡ 75 ಆಗಿದೆ.
19 ವೈದ್ಯರು 35 ರಿಂದ 50 ವರ್ಷ ಪ್ರಾಯದವರಾಗಿದ್ದಾರೆ. ಸಾವನ್ನಪ್ಪಿದ ಏಳು ವೈದ್ಯರು 35 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
ಕೊರೋನಾ ತಡೆಗಟ್ಟುವ ಹೋರಾಟದಲ್ಲಿ ವೈದ್ಯರು ಮುಂಚೂಣಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ಅವರು ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪರಿಣಿತರು ಸಲಹೆ ನೀಡಿದ್ದಾರೆ.