ಮುಂಬೈ: ಮಾರಕ ಕೊರೋನಾಕ್ಕೆ ಮಹಾರಾಷ್ಟ್ರದಲ್ಲಿ ಬಲಿಯಾದ ಪೊಲೀಸರ ಸಂಖ್ಯೆ 94ಕ್ಕೆ ಏರಿದೆ. ಇಂದು ಹೊಸದಾಗಿ ಒಬ್ಬ ಪೊಲೀಸ್ ಕಾನ್ ಸ್ಟೇಬಲ್ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೊಸದಾಗಿ 101 ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತ ಪೊಲೀಸರ ಸಂಖ್ಯೆ ಇದೀಗ 8584ಕ್ಕೆ ತಲುಪಿದೆ. ಅತ್ಯಧಿಕ ಕೊರೋನಾ ಪ್ರಕರಣ ರಾಜಧಾನಿ ಮುಂಬೈನಲ್ಲಿ ವರದಿಯಾಗಿದೆ.
ಮುಂಬೈ ಮಹಾನಗರದಲ್ಲಿ ಅತ್ಯಧಿಕ ನಿರ್ಬಂಧಿತ ವಲಯಗಳಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ