ನವದೆಹಲಿ: ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 8 ಮಿಲಿಯನ್ ಉದ್ಯೋಗಿಗಳು ತಮ್ಮ ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್)ಯಿಂದ 30,000 ಕೋಟಿ ರೂ. ಹಿಂಪಡೆದಿದ್ದಾರೆ.
2020ರ ಏಪ್ರಿಲ್’ನಿಂದ ಜುಲೈ 3ನೇ ವಾರದ ನಡುವಿನ ಅವಧಿಯಲ್ಲಿ ಹಣ ಹಿಂತೆಗೆತದ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ಕೊರೋನಾ ಸೋಂಕಿನಿಂದಾಗಿ ಉದ್ಯೋಗ ನಷ್ಟ, ಸಂಬಳ ಕಡಿತ, ವೈದ್ಯಕೀಯ ವೆಚ್ಚಗಳು ಈ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಇಪಿಎಫ್ಒ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 3 ಮಿಲಿಯನ್ ಫಲಾನುಭವಿಗಳು ಕೋವಿಡ್ ವಿಶೇಷ ವ್ಯವಸ್ಥೆಯಡಿ 8000 ಕೋಟಿಯಷ್ಟು ಹಣ ಮರಳಿ ಪಡೆದಿದ್ದರೆ, 5 ಮಿಲಿಯನ್ನಷ್ಟು ಜನ ವೈದ್ಯಕೀಯ ವೆಚ್ಚದಡಿ 22,000 ಕೋಟಿ ರೂ. ಹಿಂಪಡೆದಿದ್ದಾರೆ ಎಂದು ಇಪಿಎಫ್ಒ ಕಚೇರಿ ಮೂಲಗಳು ತಿಳಿಸಿವೆ.
ಕೊರೋನಾ ಎಫೆಕ್ಟ್; 30 ಸಾವಿರ ಕೋಟಿ ರೂ. ಹಿಂಪಡೆದ 8 ಮಿಲಿಯನ್ ನೌಕರರು
Follow Us