Tuesday, March 28, 2023

30ಕ್ಕೂ ಹೆಚ್ಚು ಸಂಸದರಿಗೆ, ಸಂಸತ್ ಭವನದ 83 ಉದ್ಯೋಗಿಗಳಿಗೆ ಕೊರೋನಾ

Follow Us

newsics.com
ನವದೆಹಲಿ: ರಾಜ್ಯಸಭೆ ಕಾರ್ಯಾಲಯದ 1500 ಉದ್ಯೋಗಿಗಳ ಪೈಕಿ 83 ಉದ್ಯೋಗಿಗಳಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.
ಸಂಸತ್ ಅಧಿವೇಶನ ಪ್ರಾರಂಭವಾದ ಬಳಿಕ ರಾಜ್ಯಸಭೆ ಹಾಗೂ ಲೋಕಸಭೆಯ 30ಕ್ಕೂ ಹೆಚ್ಚು ಸಂಸದರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ.
ಸೆ.7ರಂದು ಸಂಸತ್ ಆವರಣದಲ್ಲಿ ಕೊರೋನಾ ತಪಾಸಣೆ ಆಯೋಜಿಸಲಾಗಿತ್ತು. ಸೆ.14ರಂದು ಸಂಸತ್ ಅಧಿವೇಶನ ಪ್ರಾರಂಭವಾಗಿತ್ತು. ಸೆ.7ಕ್ಕೂ ಮೊದಲು ರಾಜ್ಯಸಭೆಯ 25 ಉದ್ಯೋಗಿಗಳಲ್ಲಿ ಮಾತ್ರ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಸಂಸತ್ ಅಧಿವೇಶನ ಶುರುವಾದ ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಎಂಟೇ ದಿನದಲ್ಲಿ ಏರಿಕೆಯಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಇತರೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು, ಕೊರೋನಾ ಸೋಂಕಿಗೆ ಒಳಗಾದ ಎಲ್ಲ 83 ಉದ್ಯೋಗಿಗಳಿಗೆ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದರು.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!