♦ ಮರಣೋತ್ತರ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದರೆ ಬೆಳಗಾವಿಗೆ ಶಿಫ್ಟ್ ಸಾಧ್ಯತೆ
newsics.com
ನವದೆಹಲಿ: ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದರೆ ಬೆಳಗಾವಿಗೆ ಶಿಫ್ಟ್ ಮಾಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೊರೋನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರ ದೇಹವನ್ನು ಬೆಳಗಾವಿಗೆ ತರಲು ಈಗ ಕೊರೋನಾ ನಿಯಮಗಳು ಅಡ್ಡಿಯಾಗಿವೆ. ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನೆಲೆಯಲ್ಲಿ ಅವರ ಶರೀರವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ. ಇದರಿಂದ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಬೆಳಗಾವಿಗೆ ಪಾರ್ಥೀವ ಶರೀರ ಕೊಂಡೊಯ್ಯಲು ಕುಟುಂಬ ವರ್ಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಕೋರಿಕೊಂಡಿತ್ತು. ಆದರೆ, ಪಿಯೂಷ್ ಗೋಯೆಲ್ ಕೂಡ ನಿಬಂಧನೆ ಸಡಿಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೊರೋನಾ ಸೋಂಕಿನ ಕುರಿತು ನಿಬಂಧನೆಗಳು ಇದಕ್ಕೆ ಅವಕಾಶ ನೀಡಿಲ್ಲ.
ಪಾರ್ಥಿವ ಶರೀರವನ್ನು ಕೊಂಡೊಯ್ಯವುದಕ್ಕೆ ಏಮ್ಸ್ ವೈದ್ಯರೂ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸುರೇಶ್ ಅಂಗಡಿಯವರ ಮರಣೋತ್ತರ ಕೊರೋನಾ ಪರೀಕ್ಷೆ ನಡೆಸಲು ಏಮ್ಸ್ ವೈದ್ಯರು ಒಪ್ಪಿದ್ದು, ಈ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ವರದಿ ಬಂದರೆ ಅಂಗಡಿಯವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಸುರೇಶ ಅಂಗಡಿ ಇನ್ನಿಲ್ಲ
ಅಂಗಡಿ ನಿಧನಕ್ಕೆ ಮೋದಿ, ಬಿಎಸ್’ವೈ ಸೇರಿ ಹಲವರ ಕಂಬನಿ