Wednesday, November 30, 2022

ಕೊರೋನಾ ಎಫೆಕ್ಟ್: ಬಟ್ಟೆಗಳ ಬದಲಾಗಿ ಗೋಡೆಯಲ್ಲಿ ಚಿತ್ರ ಬಿಡಿಸುತ್ತಿರುವ ಕಲಾವಿದರು

Follow Us

newsics.com

ಭುವನೇಶ್ವರ: ಒಡಿಶಾ ಸುಂದರ ಚಿತ್ರಕಲೆಗಳಿಗೆ ಖ್ಯಾತಿ ಪಡೆದಿದೆ.  ಒಡಿಶಾದ ರಘುರಾಜಪುರ ಸುಂದರ ಚಿತ್ರ ಕಲೆಗಳಿಗೆ ಹೆಸರುವಾಸಿಯಾಗಿದೆ. ಬಟ್ಟೆಯ ಮೇಲೆ ಸುಂದರ ಕಲಾಕೃತಿಗಳನ್ನು ಬಿಡಿಸುತ್ತಾರೆ. ಇದಕ್ಕೆ ಪಟ ಚಿತ್ರಗಳು ಎಂದು ಕರೆಯುತ್ತಾರೆ.

ಆದರೆ ಇದೀಗ ಕೊರೋನಾ ಈ ಕಲಾವಿದರ ಬದುಕಿನಲ್ಲಿ ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡಿದೆ. ಸಿದ್ದಪಡಿಸಲಾಗಿರುವ  ವರ್ಣಚಿತ್ರಗಳು ಮಾರುಕಟ್ಟೆ ದೊರೆಯದೆ ಮನೆಯಲ್ಲಿ  ಉಳಿದಿವೆ.

ಕಳೆದ ನಾಲ್ಕು ತಲೆಮಾರಿನಿಂದ ಈ ಚಿತ್ರ ರಚಿಸಿ ಬದುಕು ಕಟ್ಟಿಕೊಂಡಿರುವ ರಘು ನಾಥ್  ಕುಟುಂಬ ಕೂಡ ಇದಕ್ಕೆ ಹೊರತಾಗಿಲ್ಲ. ಬಟ್ಟೆಗಳ ಬದಲಾಗಿ ಮನೆಗಳ ಗೋಡೆಗಳನ್ನು ಇದೀಗ ಚಿತ್ರಗಳಿಂದ ಅಲಂಕರಿಸುತ್ತಿದ್ದಾರೆ. ಜೈವಿಕ ಬಣ್ಣಗಳ ಬಳಕೆ ಈ ಚಿತ್ರಗಳ  ಮತ್ತೊಂದು ವಿಶೇಷತೆ.

ರಘರಾಜಪುರ ಗ್ರಾಮಕ್ಕೆ ಹೆರಿಟೇಜ್ ಗ್ರಾಮ ಎಂಬ ಗೌರವ ಕೂಡ ದೊರೆತಿದೆ. ಆದರೆ ಕಲಾವಿದರ ಬದುಕು ಇನ್ನೂ ಹಸನಾಗಿಲ್ಲ.

ಸಿಂಗಲ್ ಸ್ಕ್ರೀನ್ ಥಿಯೇಟರ್’ಗಳೆಂದರೆ ಪಂಚ ಪ್ರಾಣ

 

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!