Monday, November 29, 2021

ಕೊರೋನಾ: ಒಂದೂ ಪಂದ್ಯವಾಡದೆ ಮರಳಿದ ದಕ್ಷಿಣ ಆಫ್ರಿಕಾ

Follow Us

ನವದೆಹಲಿ: ಕೋವಿಡ್‌-19 ಸೋಂಕು ಭೀತಿಯ ಹಿನ್ನೆಲೆಯಲ್ಲಿ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಿದ ಬಳಿಕ ಕೋಲ್ಕತಾದಲ್ಲಿ ತಂಗಿದ್ದ ದಕ್ಷಿಣ ಆಫ್ರಿಕಾ ತಂಡ ಮಂಗಳವಾರ ತವರಿಗೆ ಪ್ರಯಾಣ ಬೆಳೆಸಿತು.

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಒಂದೂ ಎಸೆತ ಕಾಣದೆ ಮಳೆಗೆ ಬಲಿಯಾಗಿತ್ತು. ಬಳಿಕ, ಕೊರೋನಾ  ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿ ಹಿತದೃಷ್ಠಿಯಿಂದ ಸರಣಿಯ ಇನ್ನುಳಿದ ಪಂದ್ಯಗಳನ್ನು ರದ್ದು ಮಾಡಲಾಗಿತ್ತು.

ಇದರಿಂದ ಭಾರತ ಪ್ರವಾಸಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡ ಒಂದೇ-ಒಂದು ಎಸೆತ ಆಡದೆ ತವರಿಗೆ ಮರಳುತ್ತಿದ್ದಾರೆ. ದುಬೈ ವಿಮಾನವೇರಲು ಸೋಮವಾರವೇ ಪ್ರವಾಸಿ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಕೋಲ್ಕತಾಗೆ ಆಗಮಿಸಿತ್ತು.

ಮತ್ತಷ್ಟು ಸುದ್ದಿಗಳು

Latest News

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...
- Advertisement -
error: Content is protected !!