Monday, April 12, 2021

ಕೊರೋನಾ ಸ್ವೀಟ್ ಮೈಸುರ್ಪಾ ಮಾರಾಟಕ್ಕೆ ಬ್ರೇಕ್!

ಚೆನ್ನೈ: ಕೊರೋನಾ ಸೋಂಕನ್ನು ಗುಣಪಡಿಸುತ್ತದೆಂದು ಮಾರಾಟ ಮಾಡಲಾಗುತ್ತಿದ್ದ ಹರ್ಬಲ್ ಮೈಸೂರ್ ಪಾಕ್ ಮಾರಾಟ ಮಳಿಗೆಯ ಲೈಸನ್ಸ್ ರದ್ದುಗೊಂಡಿದೆ.
ತಮಿಳುನಾಡಿನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಬುಧವಾರ ತಪಾಸಣೆ ನಡೆಸಿ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ. ಸುಮಾರು 150 ಕಿಲೋಗ್ರಾಂಗಳಷ್ಟು ಗಿಡಮೂಲಿಕೆ ಮೈಸೂರ್ ಪಾಕನ್ನು ವಶಪಡಿಸಿಕೊಂಡಿದ್ದಾರೆ.
ಕೊಯಮತ್ತೂರು ಜಿಲ್ಲೆಯ ಚಿನ್ನಿಯಂಪಾಲಯಂ ಪ್ರದೇಶದ ಸಿಹಿ ಅಂಗಡಿಯ ಮಾಲೀಕರಾದ ಶ್ರೀರಾಮ್ ಅವರು ತಯಾರಿಸಿ ಮಾರಾಟ ಮಾಡುತ್ತಿದ್ದ ಕೊರೋನಾ ವೈರಸ್ ಸೋಂಕನ್ನು ಗುಣಪಡಿಸುವ ಹರ್ಬಲ್ ಮೈಸೂರ್ ಪಾಕ್ ಭಾರೀ ಸುದ್ದಿಯಾಗಿತ್ತು. ಪ್ರತಿ ಕಿಲೋಗೆ ಸುಮಾರು 800 ರೂ.ಗಳಿಗೆ ಮಾರಾಟವಾಗುತ್ತಿತ್ತು.
ಶ್ರೀರಾಮ್ ಅವರು ವೈರಸ್ ಸೋಂಕನ್ನು ಗುಣಪಡಿಸುವ ಹರ್ಬಲ್ ಮೈಸೂರ್ ಪಾಕ್ ತಯಾರಿಸುವುದಾಗಿ ಹೇಳಿಕೆ ನೀಡಿದಾಗಿನಿಂದಲೇ ಬಾರಿ ಸುದ್ದಿಯಾಗಿತ್ತು. ಶ್ರೀರಾಮ್ ಅವರು ಈ ಮೈಸೂರ್ ಪಾಕ್ ಗೆ “ಫೋಟಾನ್ ಸ್ಪೀಡ್ ಕರೋನಾ ಕ್ಯೂರ್ ಮೈಸುರ್ಪಾ” ಎಂದು ಹೆಸರಿತ್ತಿದ್ದರು. ಜತೆಗೆ ಡೋಸೇಜ್ ಚಾರ್ಟ್ ಜಾಹೀರಾತನ್ನೂ ಬಿಡುಗಡೆ ಮಾಡಿದ್ದರು.
ಬಳಕೆಯ ನಿರ್ದೇಶನದಲ್ಲಿ ಈ ಮೈಸೂರ್ ಪಾಕ್’ನ ಒಂದು ತುಂಡನ್ನು 13 ಬಾರಿ ಅಗಿಯಬೇಕು, ತುಟಿಗಳನ್ನು ಮುಚ್ಚಬೇಕು ಎಂದು ಹೇಳಿದ್ದರು. ಮತ್ತೊಂದು ಹೇಳಿಕೆಯಲ್ಲಿ ವ್ಯಕ್ತಿಯು ನಿದ್ದೆ ಮಾಡುವಾಗ, ಅವನು/ ಅವಳು ತಮ್ಮನ್ನು ತಲೆಯಿಂದ ಕಾಲಿನವರೆಗೆ ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಅದರಿಂದ ಅವರು ಚೆನ್ನಾಗಿ ಬೆವರುತ್ತಾರೆ ಎಂದಿದ್ದರು.
ಯಾವುದೇ ರೋಗಲಕ್ಷಣಗಳಿಲ್ಲದ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೈಸುರ್ಪಾ ಸಿಹಿಯನ್ನು ಸಹ ಸೇವಿಸಬಹುದು ಎಂದು ಶ್ರೀರಾಮ್ ಹೇಳಿದ್ದಾರೆ. ಗಿಡಮೂಲಿಕೆಗಳ ಮೈಸುರ್ಪಾ ಸೂತ್ರವನ್ನು ಕೇಂದ್ರ ಸರ್ಕಾರದೊಂದಿಗೆ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಅವರು ಸಿದ್ಧರಾಗಿದ್ದಾರೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಆದರೆ, ಆಹಾರ ಸುರಕ್ಷತಾ ಇಲಾಖೆ ಅಂಗಡಿಯ ಪರವಾನಗಿಯನ್ನೇ ರದ್ದುಗೊಳಿಸಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!