newsics.com
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತೀಶ್ ಗಡ್ಕರಿ ಅವರಿಗೆ ಬುಧವಾರ ಕೊರೋನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ನಿತಿನ್ ಗಡ್ಕರಿ ಅವರೇ ಟ್ವಿಟರ್’ನಲ್ಲಿ ಈ ಮಾಹಿತಿ ನೀಡಿದ್ದು, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಹಿನ್ನೆಲೆಯಲ್ಲಿ ನಿನ್ನೆ (ಸೆ.15) ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ನನಗೆ ಕೊರೋನಾ ಸೋಂಕು ಇರುವುದು ಕಂಡುಬಂದಿದ್ದು, ನನ್ನ ಆರೋಗ್ಯ ಉತ್ತಮವಾಗಿದೆ. ಎಂದಿನಂತೆ ಚೆನ್ನಾಗಿದ್ದು, ಸದ್ಯ ನಾನು ಪ್ರತ್ಯೇಕವಾಗಿ ಇದ್ದೇನೆ ಅಂತ ಹೇಳಿದ್ದಾರೆ.
ಆದರೆ ಈಗ ವೈದ್ಯರ ಸಲಹೆ ಮೇರೆಗೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.