newsics.com
ನವದೆಹಲಿ: ಕೊವಿಶಿಲ್ಡ್ ಮತ್ತು ಕೊವಾಕ್ಸಿನ್ ಎರಡು ಲಸಿಕೆ ಪಡೆದ ಬಳಿಕ ಬೂಸ್ಟರ್ ಡೋಸ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೈದರಾಬಾದ್ ಮೂಲದ ಬಯೋಲೋಜಿಕಲ್ ಇ ಸಂಸ್ಥೆ ಹೆಜ್ಜೆ ಇರಿಸಿದೆ. ಈ ಸಂಬಂಧ ಮೂರನೆ ಹಂತದ ಪ್ರಯೋಗಕ್ಕೆ ಅನುಮತಿ ನೀಡಬೇಕು ಎಂದು ಬಯೋಲೋಜಿಕಲ್ ಸಂಸ್ಥೆ ಭಾರತ ಔಷಧ ಮಹಾ ನಿಯಂತ್ರಕರ ಬಳಿ ಅರ್ಜಿ ಸಲ್ಲಿಸಿದೆ.
ದೇಶದಲ್ಲಿ ಎರಡು ಡೋಸ್ ಕೊರೋನಾ ಲಸಿಕೆ ಪಡೆದವರಿಗೆ ಹೆಚ್ಚಿನ ಸುರಕ್ಷತೆ ಖಾತರಿಪಡಿಸಲು ಕೊರ್ಬೆವಾಕ್ಸ್ ಬೂಸ್ಟರ್ ಲಸಿಕೆಯನ್ನು ಬಯೋಲೋಜಿಕಲ್ ಇ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ.
ಕೊರೋನಾ ಮಹಾ ಮಾರಿ ನಿಯಂತ್ರಣಕ್ಕೆ ಬೂಸ್ಟರ್ ಅಗತ್ಯ ಇದೆಯೇ ಇಲ್ಲವೇ ಎಂಬ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.
5ರಿಂದ 18 ವರ್ಷದೊಳಗಿನವರ ಲಸಿಕೆ ಅಭಿವೃದ್ಧಿ ಸಂಬಂಧ ಎರಡು ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗಕ್ಕೆ ಸೆಪ್ಟೆಂಬರ್ ನಲ್ಲಿ ಬಯೋಲೋಜಿಕಲ್ ಸಂಸ್ಥೆಗೆ ಅನುಮತಿ ನೀಡಲಾಗಿತ್ತು