Wednesday, May 25, 2022

ಕೋವಿಡ್’ನಿಂದ ವೃದ್ಧರ ಮೆದುಳಿಗೆ ಹೆಚ್ಚು ಅಪಾಯ:ಅಧ್ಯಯನ ವರದಿ

Follow Us

newsics.com

ಹೊಸದಿಲ್ಲಿ: ಕೋವಿಡ್ 19 ಸೋಂಕು ವೃದ್ಧರ ಮಿದುಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ .

ನ್ಯೂಯಾರ್ಕ್ ಯೂನಿವರ್ಸಿಟಿಯ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ವೃದ್ಧರ ಮಿದುಳಿಗೆ ಹಾನಿಯಾಗುವ ವಿಚಾರ ಪತ್ತೆಯಾಗಿದೆ. ಕೋವಿಡ್‌ನಿಂದ ಗುಣಮುಖರಾದ ವೃದ್ಧರು ಟಾಕ್ಸಿಕ್ ಮೆಟಬೋಲಿಕ್ ಎನ್‌ಸೆಫೆಲೊಪತಿ ಯಿಂದ ಬಳಲುತ್ತಿರುತ್ತಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಬಳಲುತ್ತಿರುವ ಶೇಕಡಾ 60ರಷ್ಟು ವೃದ್ಧರಲ್ಲಿ ಮೆದುಳಿಗೆ ಹಾನಿಯಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

2020ರಲ್ಲಿ ಮೊದಲನೇ ಕೋವಿಡ್ ಅಲೆ ಇದ್ದ ಸಂದರ್ಭ ಈ ಅಧ್ಯಯನವನ್ನು ನಡೆಸಲಾಗಿದೆ. ನೂತನ ರೂಪಾಂತರ ತಳಿಗಳಾದ ಡೆಲ್ಟಾ ಮತ್ತು ಓಮೈಕ್ರಾನ್ ಪ್ರಕರಣಗಳಲ್ಲೂ ಮಿದುಳಿಗೆ ಹಾನಿ ಇದೆಯೇ ಎಂಬುದು ತಿಳಿದುಬಂದಿಲ್ಲ.

ಕೋವಿಡ್ ಬಂದ ನಂತರ ಟಿಎಂಇ ಬೆಳವಣಿಗೆ ಹೊಂದಬಹುದು ಅಥವಾ ಕೆಲವು ಸಂದರ್ಭ ಸರ್ಜರಿ ವೇಳೆ ಅರಿವಳಿಕೆ ನೀಡುವ ಸಂದರ್ಭ ಟಿಎಂಇ ಬೆಳವಣಿಗೆಯಾಗುತ್ತದೆ ಎಂದು ವರದಿ ತಿಳಿಸಿದೆ.

ದೇಹದ ಜೀವಕೋಶಗಳು ನಂಜಾಗಿ ಪರಿವರ್ತನೆಗೊಂಡಾಗ ಮತ್ತು ದೇಹದ ಸಾಮಾನ್ಯ ಕ್ರಿಯಾದಿಗಳು ನಡೆಯದಂತೆ ತಡೆದಾಗ ಟಿಎಂಇ ರೂಪ ಪಡೆಯುತ್ತದೆ. ನೆನಪಿನ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಐಎಎನ್ಎಸ್ ವರದಿ ಮಾಡಿದೆ.

ಹಿಮಪಾತದಲ್ಲಿ ಸಿಲುಕಿದ್ದ 14 ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ

ಮತ್ತಷ್ಟು ಸುದ್ದಿಗಳು

Latest News

‘ಮಳಲಿ ಮಸೀದಿಯ ಸ್ಥಳದಲ್ಲಿದೆ ಹಿಂದೂ ದೈವಿ ಶಕ್ತಿ’ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

newsics.com ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯಲ್ಲಿ ಕಟ್ಟಡ ಪತ್ತೆಯಾಗಿತ್ತು ಎಂಬ ವಿವಾದದ ಸಂಬಂಧ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ...

ಮಹಿಳೆಯರ ಟಿ 20 ಚಾಲೆಂಜ್​ನಲ್ಲಿ ಮಾಯಾ ವಿಚಿತ್ರ ಬೌಲಿಂಗ್​ : ವಿಡಿಯೋ ವೈರಲ್

newsics.com ಮಹಿಳಾ ಟಿ 20 ಚಾಲೆಂಜ್​ನಲ್ಲಿ ಸೂಪರ್​ನೋವಾಸ್​ ವಿರುದ್ಧದ ಪಂದ್ಯದಲ್ಲಿ ಬೌಲರ್​​ ಮಾಯಾ ಸೋನಾವಾನೆ ವಿಚಿತ್ರವಾಗಿ ಬೌಲಿಂಗ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ. ಮಾಯಾ ಸೋನಾವಾನೆ ಬೌಲಿಂಗ್​ ಮಾಡುವುದನ್ನು ನೋಡುವ ವೇಳೆಗೆ...

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ತಾಂಬೂಲ ಪ್ರಶ್ನೆ ಆಯೋಜಿಸಿದೆ. ಹಿಂದೂ ಧರ್ಮದ...
- Advertisement -
error: Content is protected !!