Thursday, June 17, 2021

ಗ್ರಾಮೀಣ ಪ್ರದೇಶದಲ್ಲೂ‌ ಕೊರೋನಾ‌ ಅಬ್ಬರ: ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

newsics.com

ನವದೆಹಲಿ: ಕೊರೋನಾ 2ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಹಳ್ಳಿಗಳಲ್ಲಿಯೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ, ಗ್ರಾಮೀಣ ಪ್ರದೇಶದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ ಇದೀಗ ಪ್ರತ್ಯೇಕ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಕೊರೋನಾ ಸೋಂಕಿನ ಲಕ್ಷಣ ಕಂಡುಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ ಗೈಡ್ ಲೈನ್ಸ್ ನಲ್ಲಿ ಸೂಚಿಸಿದೆ.

ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯು, ಪರೀಕ್ಷಾ ವರದಿ ಬರುವವರೆಗೆ ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸೂಚಿಸಿದ್ದು, ಪರೀಕ್ಷೆಯ ವರದಿಯು ಪಾಸಿಟಿವ್ ಬಂದರೆ ಸೋಂಕಿನ ತೀವ್ರತೆಯನ್ನು ಆಧರಿಸಿ, ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡುವುದು, ಇಲ್ಲವೇ ಸಿಸಿಸಿಗೆ ದಾಖಲಿಸುವುದು, ಇಲ್ಲವೇ ಹತ್ತಿರದ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರಿಸಿ, ಚಿಕಿತ್ಸೆ ಕೊಡಿಸುವಂತೆ ಸೂಚಿಸಿದೆ.

ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ತರಬೇತಿ ನೀಡುವಂತೆಯೂ ಸೂಚಿಸಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಮೂಲಕ ಟೆಲಿ ಕನ್ಸಲ್ಟೆಂಟ್ ನಡೆಸುವ ಮೂಲಕ ಚಿಕಿತ್ಸೆ ನೀಡುವಂತೆ ತಿಳಿಸಿದೆ. ಕೋವಿಡ್ ಕಿಟ್ ವಿತರಿಸುವಂತೆಯೂ ತಿಳಿಸಿದೆ.

ಸಾಂಕ್ರಾಮಿಕ ರೋಗವು ನಗರಗಳು ಮತ್ತು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೊರೋನಾ ಹರಡಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಅದರ ಸೋಂಕು ತಡೆಗಟ್ಟಲು ಗ್ರಾಮಗಳು ಮತ್ತು ಬುಡಕಟ್ಟು ಪ್ರದೇಶಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ, ಆಶಾ ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲಿ ಶೀತ-ಜ್ವರದ ಮೇಲೆ ನಿಗಾ ಇಡಬೇಕಾಗುತ್ತದೆ. ಅವರೊಂದಿಗೆ ಆರೋಗ್ಯ ಸ್ಯಾನಿಟೈಸೇಶನ್ ಮತ್ತು ನ್ಯೂಟ್ರಿಷನ್ ಸಮಿತಿಯೂ ಇರುತ್ತದೆ. ಕೊರೋನಾದ ಲಕ್ಷಣಗಳು ಕಂಡು ಬರುವ ರೋಗಿಗಳಿಗೆ ಗ್ರಾಮ ಮಟ್ಟದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯನ್ನು ನೋಡುವಂತೆ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯ ಪ್ರಕಾರ, ಈಗಾಗಲೇ ಗಂಭೀರ ಕಾಯಿಲೆಗಳಿಂದ ಸೋಂಕಿಗೆ ಒಳಗಾದ ಅಥವಾ ಕಡಿಮೆ ಆಮ್ಲಜನಕದ ಮಟ್ಟವನ್ನು ಹೊಂದಿರುವ ರೋಗಿಗಳನ್ನು ದೊಡ್ಡ ಆರೋಗ್ಯ ಸಂಸ್ಥೆಗಳಿಗೆ ಕಳುಹಿಸಬೇಕು. ಒಪಿಡಿಯನ್ನು ಶೀತ-ಜ್ವರ ಮತ್ತು ಉಸಿರಾಟದ ಸಮಸ್ಯೆಗಳಿಗೆ ಪ್ರತಿ ಉಪ ಕೇಂದ್ರದಲ್ಲಿ ನಡೆಸಬೇಕು ಎಂದು ಸೂಚಿಸಿದೆ.

ಆರೋಗ್ಯ ಅಧಿಕಾರಿಗಳು ಮತ್ತು ಎಎನ್ಎಂಗಳಿಗೆ ತ್ವರಿತ ಕೊರೋನಾ ಪರೀಕ್ಷೆಗಳ ಬಗ್ಗೆ ತರಬೇತಿ ನೀಡಬೇಕು. ಪ್ರತಿ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರದಲ್ಲಿ ತ್ವರಿತ ಪ್ರತಿಜನಕ ಪರೀಕ್ಷಾ ಕಿಟ್ ಗಳನ್ನು ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಬ್ಲ್ಯಾಕ್ ಫಂಗಸ್’ಗೆ ಉಚಿತ ಚಿಕಿತ್ಸೆ: ಸಿಎಂ ಜತೆ ಚರ್ಚೆ

ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಣ್ಣಾನೆ ರಕ್ಷಣೆ

ಮತ್ತಷ್ಟು ಸುದ್ದಿಗಳು

Latest News

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ...

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ ಸುರಿದಂತೆ ಮಳೆ, ರಾಜ್ಯದಲ್ಲೇ ಅತ್ಯಧಿಕ ದಾಖಲೆಯ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...
- Advertisement -
error: Content is protected !!